ಅಧ್ಯಯನದಲ್ಲಿ ಶಾಕಿಂಗ್ ಮಾಹಿತಿ ಬಹಿರಂಗ: ಸೋಮವಾರ ಹೃದಯಾಘಾತ ಅಧಿಕ

ನವದೆಹಲಿ: ಹೊಸ ಸಂಶೋಧನೆಯ ಪ್ರಕಾರ, ಜನರು ವಾರದ ಯಾವುದೇ ದಿನಕ್ಕಿಂತ ಸೋಮವಾರದಂದು ಗಂಭೀರ ಹೃದಯಾಘಾತವನ್ನು ಅನುಭವಿಸುವ ಸಾಧ್ಯತೆಯಿದೆ.

ಅಧ್ಯಯನದ ಸಂಶೋಧನೆಗಳನ್ನು ಮ್ಯಾಂಚೆಸ್ಟರ್‌ನಲ್ಲಿ ನಡೆದ ಬ್ರಿಟಿಷ್ ಕಾರ್ಡಿಯೋವಾಸ್ಕುಲರ್ ಸೊಸೈಟಿ(BCS) ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಗಿದೆ. ಬೆಲ್‌ಫಾಸ್ಟ್ ಹೆಲ್ತ್ ಅಂಡ್ ಸೋಶಿಯಲ್ ಕೇರ್ ಟ್ರಸ್ಟ್ ಮತ್ತು ಐರ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನ ವೈದ್ಯರು ಈ ಅಧ್ಯಯನವನ್ನು ಮಾಡಿದ್ದಾರೆ.

ಈ ಉದ್ದೇಶಕ್ಕಾಗಿ 20,000 ಕ್ಕೂ ಹೆಚ್ಚು ರೋಗಿಗಳನ್ನು ಅಧ್ಯಯನ ಮಾಡಲಾಗಿದೆ. ಸೋಮವಾರ ಹೃದಯಾಘಾತ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುವ ಸಾಧ್ಯತೆ ಇದೆ ಎನ್ನುವುದು ಅಧ್ಯಯನದಲ್ಲಿ ಕಂಡುಬಂದಿದೆ.

ಸೋಮವಾರ ಕೆಲಸದ ಆರಂಭದ ದಿನವಾಗಿದೆ. ಸೋಮವಾರದಂದು ಹೆಚ್ಚಿನ ಪ್ರಮಾಣದಲ್ಲಿ ಗಂಭೀರ ಹೃದಯಾಘಾತ ಸಂಭವಿಸುವ ಸಾಧ್ಯತೆ ಅಧಿಕ ಎಂದು ಅಧ್ಯಯನ ತಿಳಿಸಿದೆ. 2013 ರಿಂದ 2018ರ ನಡುವೆ ಐರ್ಲೆಂಡ್ ನಲ್ಲಿ ಗಂಭೀರ ರೀತಿಯ ಹೃದಯಾಘಾತಕ್ಕೆ ಒಳಗಾದ 10,528 ರೋಗಿಗಳ ದತ್ತಾಂಶಗಳ ವಿಶ್ಲೇಷಣೆ ನಡೆಸಿ ಈ ಅಭಿಪ್ರಾಯಕ್ಕೆ ಬರಲಾಗಿದೆ.

ಬೆಲ್ ಫಾಸ್ಟ್ ಹೆಲ್ತ್ ಅಂಡ್ ಸೋಷಲ್ ಕೇರ್ ಟ್ರಸ್ಟ್ ಅಂಡ್ ರಾಯಲ್ ಕಾಲೇಜ್ ಆಫ್ ಸರ್ಜನ್ ಸಂಶೋಧಕರು ವಿಸ್ತೃತ ಅಧ್ಯಯನ ಕೈಗೊಂಡಿದ್ದರು. ಎಸ್.ಟಿ. -ಸೆಗ್ಮೆಂಟ್ ಎಲಿವೇಶನ್ ಮಯೋಕಾರ್ಡಿಯಲ್ ಇನ್ ಫ್ರಾಕ್ಷನ್ ಎಂದು ವೈದ್ಯಕೀಯ ವಲಯದಲ್ಲಿ ಇದು ಪರಿಚಿತವಾಗಿದೆ.

ಕೊರೋನರಿ ಆರ್ಟಿಲರಿ ಸಂಪೂರ್ಣವಾಗಿ ಬ್ಲಾಕ್ ಆದ ಸಂದರ್ಭದಲ್ಲಿ ಇದು ಉಂಟಾಗುತ್ತದೆ. ಬ್ರಿಟನ್ ನ ಮ್ಯಾಂಚೆಸ್ಟರ್ ನಲ್ಲಿ ನಡೆದ ಬ್ರಿಟಿಷ್ ಕಾರ್ಡಿಯೋವಸ್ಕುಲಾರ್ ಸೊಸೈಟಿ ಸಮ್ಮೇಳನದಲ್ಲಿ ಅಧ್ಯಯನದ ವರದಿ ಮಂಡಿಸಲಾಗಿದ್ದು, ಕೆಲಸದ ವಾರದಲ್ಲಿ ಆರಂಭದ ದಿನ ಅಂದರೆ ಸೋಮವಾರ ಎಸ್.ಟಿ. -ಸೆಗ್ಮೆಂಟ್ ಎಲಿವೇಶನ್ ಮಯೋಕಾರ್ಡಿಯಲ್ ಇನ್ ಫ್ರಾಕ್ಷನ್ ಹೃದಯಘಾತದ ದರ ಹೆಚ್ಚಾಗಿದೆ ಎಂದು ಗೊತ್ತಾಗಿದೆ. ಭಾನುವಾರ ಕೂಡ ಈ ಪ್ರಮಾಣ ನಿರೀಕ್ಷೆಗಿಂತ ಹೆಚ್ಚಾಗಿರುತ್ತದೆ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read