
ಕಲಬುರಗಿ: ಏಕಾಏಕಿ ಕುಸಿದು ಬಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
19 ವರ್ಷದ ರವಿ ಕುಮಾರ್ ಮೃತ ವಿದ್ಯಾರ್ಥಿ. ಕಲಬುರಗಿಯ ಗಂಗಾನಗರದ ನಿವಾಸಿಯಾಗಿರುವ ರವಿ ಕುಮಾರ್ ಬೆಳಿಗ್ಗೆ ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಕಲಬುರಗಿಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ರವಿ ಕುಮಾರ್ 4ನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.