alex Certify ಆರೋಗ್ಯ ವಿಮಾ ಕ್ಷೇತ್ರಕ್ಕೂ ಕಾಲಿಡಲು ಸಜ್ಜಾದ LIC | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯ ವಿಮಾ ಕ್ಷೇತ್ರಕ್ಕೂ ಕಾಲಿಡಲು ಸಜ್ಜಾದ LIC

ನವದೆಹಲಿ: ದೇಶಾದ್ಯಂತ ಹಲವು ಕಂಪನಿಗಳು ಆರೋಗ್ಯ ವಿಮಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿವೆ. ಇದೀಗ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವನ್ ಭೀಮಾ ನಿಗಮ-ಎಲ್ಐಸಿ ಕೂಡ ಆರೋಗ್ಯ ವಿಮಾ ಕ್ಷೇತ್ರ (ಹೆಲ್ತ್ ಇನ್ಶೂರೆನ್ಸ್)ಕ್ಕೆ ಕಾಲಿಡಲು ಸಜ್ಜಾಗಿದೆ.

ಈ ನಿಟ್ಟಿನಲ್ಲಿ ಆರೋಗ್ಯ ವಿಮಾ ಕ್ಷೇತ್ರದಲ್ಲಿನ ಐದು ಅಗ್ರ ಕಂಪನಿಗಳ ಪೈಕಿ ಒಂದನ್ನು ಖರೀದಿಸಿ ಹೊಸ ಕ್ಷೇತ್ರ ಪ್ರವೇಶಿಸಲಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರಕ್ಕೆ ತಾನು ಜಾರಿಗೊಳಿಸಲಿರುವ ಉದ್ದೇಶಿತ ಆರೋಗ್ಯ ವಿಮಾ ಯೋಜನೆ ವಿವವಗಳನ್ನು ಎಲ್ ಐಸಿ ಸಲ್ಲಿಕೆ ಮಾಡಿದೆ.

ಪರವಾನಿಗಿ ಪಡೆಯಲು ಮೂರು ತಿಂಗಳು ಕಾಲಾವಕಾಶದ ಅಗತ್ಯವಿದ್ದು, ಈ ಅವದಿಯಲ್ಲಿ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕ್ಷೇತ್ರದ ಆರೋಗ್ಯ ವಿಮೆ ನಿಡುವ ಕಂಪನಿಗಳ ಪೈಕಿ ಒಂದನ್ನು ಖರೀದಿಸಲು ಎಲ್ ಐಸಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ವರದಿಗಳ ಪ್ರಕಾರ ಒಂದು ವಿಮಾ ಸಂಸ್ಥೆ ಲೈಫ್ ಇನ್ಶೂರೆನ್ಸ್, ಜನರಲ್ ಇನ್ಶೂರೆನ್ಸ್ ಹಾಗೂ ಹೆಲ್ತ್ ಇನ್ಶೂರೆನ್ಸ್ ಈ ಮೂರು ಸೇವೆಗಳನ್ನು ನೀದಲು ಬರುವುದಿಲ್ಲ. ಇದಕ್ಕೆ ಐಆರ್ ಡಿಎಐ ನಿಯಮ ಅಡ್ದಿಯಾಗುತ್ತದೆ. ಹೀಗಾಗಿ ಸರ್ಕಾರದ ವತಿಯಿಂದಲೂ ನಿಯಮದಲ್ಲಿ ಬದಲಾವಣೆ ತರುವ ಸಾಧ್ಯತೆ ಇದೆ. ಐಆರ್ ಡಿಎಐ ನ ನಿಯಮದಲ್ಲಿ ಒಂದಿಷ್ಟು ಸಡಿಲಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ 28 ಆರೋಗ್ಯ ವಿಮಾ ಕಂಪನಿಗಳಿದ್ದು. ಇವುಗಳಲ್ಲಿ 5-7 ಕಂಪನಿಗಳು ಆರೋಗ್ಯ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿವೆ. ಇವುಗಳಲ್ಲಿ ಒಂದು ಸಂಸ್ಥೆಯನ್ನು ಖರೀದಿಸುವ ಮೂಲಕ ಎಲ್ಐಸಿ ಆರೋಗ್ಯ ವಿಮೆ ಸೇವೆ ಆರಂಭಿಸಬುಹುದು ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...