ಅನಿರೀಕ್ಷಿತವಾಗಿ ದುಬೈ ದೊರೆ ಭೇಟಿ ಮಾಡಿದ ಭಾರತೀಯ ಕುಟುಂಬ; ಫೋಟೋ ಹಂಚಿಕೊಂಡು ಸಂಭ್ರಮ

ನೀವು ಅತ್ಯಂತ ಗೌರವ ನೀಡುವ ವ್ಯಕ್ತಿ ಅಥವಾ ಸೆಲೆಬ್ರಿಟಿಗಳು ನಮ್ಮೊಂದಿಗೆ ಬೆರೆತಾಗ ನಮಗೆ ಖಂಡಿತವಾಗಿಯೂ ಅದೊಂದು ಅವಿಸ್ಮರಣೀಯ ಕ್ಷಣ ಎಂದು ಎನಿಸದೇ ಇರದು. ಇದೀಗ ಇದೇ ರೀತಿಯ ಅನುಭವವೊಂದು ದುಬೈನ ಭಾರತೀಯ ಕುಟುಂಬವೊಂದಕ್ಕೆ ಆಗಿದೆ. ಈ ಕುಟುಂಬವು ದುಬೈ ದೊರೆ ಶೇಖ್​​ ಮೊಹಮ್ಮದ್​​ ಬಿನ್​ ರಶೀದ್​ ಅಲ್​ ಮುಕ್ತೌಮ್​ ಜೊತೆಯಲ್ಲಿ ಎಲಿವೇಟರ್​ ಶೇರ್​ ಮಾಡಿದ್ದು ಇವರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.‌

ಶನಿವಾರದಂದು ವಾಣಿಜ್ಯೋದ್ಯಮಿ ಅನಸ್​ ರೆಹಮಾನ್​ ಜುನೈದ್ ಎಂಬವರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಲಿಫ್ಟ್​ನಲ್ಲಿದ್ದಾಗ ಏಕಾಏಕಿ ಶೇಖ್​ ಮೊಹಮದ್​ ಬಿನ್​ರನ್ನು ಕಂಡು ಆಶ್ಚರ್ಯಚಕಿತರಾದರು. ಅಟ್ಲಾಂಟಿಸ್​ ದಿ ರಾಯಲ್​​ನ ಎಲಿವೇಟರ್​​ ಈ ಕುಟುಂಬಕ್ಕೆ ಮರೆಯಲಾಗದ ನೆನಪಿನ ಬುತ್ತಿಯೊಂದನ್ನು ನೀಡಿದೆ.

ದೊರೆಯ ಜನ್ಮದಿನದಂದೇ ಅವರನ್ನು ಕಣ್ತುಂಬಿಕೊಂಡ ಈ ಕುಟುಂಬವು ಬಳಿಕ ಅವರೊಂದಿಗೆ ಸೆಲ್ಫಿ ಕೂಡ ತೆಗೆದುಕೊಂಡಿದೆ. ಇದಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಅನಸ್​, ದೊರೆ ತುಂಬಾ ಸ್ನೇಹಜೀವಿಯಂತೆ ಕಂಡರು. ನಾವು ಯಾವುದೇ ಸಿದ್ಧತೆಯಿಲ್ಲದೇ ಅವರನ್ನು ಭೇಟಿಯಾಗಿದ್ದೆವು. ಅವರ ಭೇಟಿ ಬಳಿಕ ನಮ್ಮ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ ಎಂದಿದ್ದಾರೆ.

ನಾವು ದೊರೆಗಳನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡಿದ್ದೇವೆ ಎಂಬುದನ್ನು ನಮಗೆ ಇಂದಿಗೂ ನಂಬಲಾಗುತ್ತಿಲ್ಲ. ನಾವಿದ್ದ ಲಿಫ್ಟ್​ನಲ್ಲಿ ದೊರೆ ಕೂಡ ಬಂದರು. ತುಂಬಾ ಸ್ನೇಹ ಜೀವಿಯಾಗಿದ್ದರು. ನನ್ನ ಪುತ್ರಿಯನ್ನು ಮಾತನಾಡಿಸಿ ನಾನು ಯಾರೆಂದು ನಿನಗೆ ಗೊತ್ತೇ ಎಂದು ಕೇಳಿದರು. ಅದು 20 ಮಹಡಿ ಕಟ್ಟಡವಾಗಿದ್ದರೂ ಸಹ ಎಲಿವೇಟರ್​ ತುಂಬಾ ವೇಗವನ್ನು ಹೊಂದಿದ್ದ ಕಾರಣ ನಮಗೆ ಮಾತನಾಡಲು ಹೆಚ್ಚು ಸಮಯ ಸಿಗಲಿಲ್ಲ ಎಂದು ಉದ್ಯಮಿ ಹೇಳಿದ್ರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read