ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಕೊನೆಯ ಹಂತ ತಲುಪಿದ್ದು, ಕಬಡ್ಡಿ ಲೀಗ್ ತನ್ನ ಪ್ರೇಕ್ಷಕರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಸ್ಟಾರ್ ಸೆಲೆಬ್ರಿಟಿಗಳು ಪಂದ್ಯ ವೀಕ್ಷಿಸುವ ಮೂಲಕ ಮನರಂಜನೆ ಪಡೆದುಕೊಳ್ಳುತ್ತಿದ್ದಾರೆ.
ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ಅತಿ ಹೆಚ್ಚು ರೈಡಿಂಗ್ ಪಾಯಿಂಟ್ ಪಡೆದ ಟಾಪ್ 5 ಆಟಗಾರರ ಪಟ್ಟಿಯನ್ನು ನಿನ್ನೆ ಬಿಡುಗಡೆ ಮಾಡಲಾಗಿದ್ದು, ಈ ಪಟ್ಟಿಯಲ್ಲಿ ದಬಾಂಗ್ ಡೆಲ್ಲಿ ತಂಡದ ಆಶು ಮಲಿಕ್ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದಾರೆ.
ಆಟಗಾರರು ರೈಡಿಂಗ್ ಪಾಯಿಂಟ್ಸ್ ತಂಡ
ಆಶು ಮಲಿಕ್ 240 ದಬಾಂಗ್ ಡೆಲ್ಲಿ
ಅರ್ಜುನ್ ದೇಶ್ವಾಲ್ 233 ಜೈಪುರ್ ಪಿಂಕ್ ಪ್ಯಾಂಥರ್ಸ್
ಮಣಿಂದರ್ ಸಿಂಗ್ 188 ಬೆಂಗಾಲ್ ವಾರಿಯರ್ಸ್
ಪವನ್ ಸೆಹ್ರಾವತ್ 171 ತೆಲುಗು ಟೈಟನ್ಸ್
ನರೇಂದರ್ ಕಂಡೋಲಾ 169 ತಮಿಳ್ ತಲೈವಾಸ್