
ಬೆಂಗಳೂರು: ತಿಂಗಳಲ್ಲಿ ಜೆಡಿಎಸ್ ಪದಾಧಿಕಾರಿಗಳನ್ನು ಬದಲಾವಣೆ ಮಾಡಲಿದ್ದು, ಪಕ್ಷ ಸಂಘಟಿಸಲು ಕ್ರಿಯಾಶೀಲರಿಗೆ ಅವಕಾಶ ಕಲ್ಪಿಸುವುದಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಲು ಕ್ರಿಯಾಶೀಲರಿಗೆ ಅವಕಾಶ ಮಾಡಿಕೊಡಲು ಅಗತ್ಯ ಎಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಜೆಡಿಎಸ್ ಪಕ್ಷದ ರಾಜ್ಯ ಸಮಿತಿ, ಜಿಲ್ಲಾ ಘಟಕ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳನ್ನು ಬದಲಾವಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ನಮ್ಮ ತಕರಾರು ಇಲ್ಲ. ಅದನ್ನು ಇನ್ನೂ ಚೆನ್ನಾಗಿ ಅನುಷ್ಠಾನ ಮಾಡಲಿ. ಗ್ಯಾರಂಟಿ ಯೋಜನೆಯ ಅಡ್ಡ ಪರಿಣಾಮದಿಂದ ಸಂಕಷ್ಟಕ್ಕೆ ಸಿಲುಕಿದವರನ್ನು ಕೂಡ ಗಮನಿಸಬೇಕು. ಸರ್ಕಾರದ ವಿರುದ್ಧ ವಿಷಯಾಧಾರಿತ ಹೋರಾಟ ಮಾಡುತ್ತೇವೆ ಹೊರತೂ ವಿರೋಧ ಮಾಡಬೇಕೆಂಬ ಕಾರಣಕ್ಕೆ ವಿರೋಧ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.