ಮನೆಯಲ್ಲಿ ಬಿದಿರಿನ ಕೊಳಲಿದ್ದರೆ ದೂರಾಗುತ್ತೆ ಈ ಸಮಸ್ಯೆ

ಕೊಳಲನ್ನು ಬಿದಿರಿನಿಂದ ಮಾಡಲಾಗುತ್ತದೆ. ಬಿದಿರನ್ನು ದೈವಿಕವೆಂದು ಪರಿಗಣಿಸಲಾಗಿದೆ. ಪ್ರಗತಿ ಹಾಗೂ ಸಮೃದ್ಧಿಯ ಸಂಕೇತ ಬಿದಿರಿನಿಂದ ಮಾಡಿದ ಕೊಳಲು. ಮದುವೆಯಿರಲಿ ಇಲ್ಲ ಯಾವುದೇ ಶುಭ ಸಮಾರಂಭವಿರಲಿ ಅಲ್ಲಿ ಕೊಳಲು ತಯಾರಾಗುವ ಬಿದಿರನ್ನು ಬಳಸಲಾಗುತ್ತದೆ.

ಫೆಂಗ್ಶುಯಿ ಪ್ರಕಾರ ಮನೆಯಲ್ಲಿ ವಾಸ್ತು ದೋಷವಿದ್ದರೆ ಮನೆಯ ಮುಖ್ಯ ದ್ವಾರದಲ್ಲಿ ಎರಡು ಕೊಳಲನ್ನು ಇಡಿ. ಇದು ಅಲುಗಾಡಿದಾಗ ಬರುವ ಶಬ್ಧ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿ ಪ್ರವೇಶಕ್ಕೆ ನೆರವಾಗುತ್ತದೆ.

ಮಲಗುವ ಕೋಣೆಯಲ್ಲಿ ತಲೆ ಮೇಲೆ ಮರದ ತೊಲೆ  ಇರುವುದು ವಾಸ್ತು ಶಾಸ್ತ್ರದ ಪ್ರಕಾರ ಅಶುಭ. ಇದ್ರಿಂದ ಮಾನಸಿಕ ಒತ್ತಡ ಹೆಚ್ಚಾಗಿ ವಿವಾಹ ಜೀವನದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಹಾಗಾಗಿ ತೊಲೆಯ ಎರಡು ಕಡೆ ಕೊಳಲನ್ನು ಕಟ್ಟಿ. ಕೊಳಲಿನ ಬಾಯಿ ಬೆಡ್ ಕಡೆ ಇರುವಂತೆ ನೋಡಿಕೊಳ್ಳಿ. ಇದ್ರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.

ಬಿದುರಿನ ಕೊಳಲನ್ನು ಡ್ರಾಯಿಂಗ್ ರೂಮಿನಲ್ಲಿಟ್ಟರೆ ಮನೆಯ ಸುಖ-ಶಾಂತಿ ವೃದ್ಧಿಯಾಗಲಿದೆ. ಮನೆಯವರ ಮನೋಶಕ್ತಿ ಹೆಚ್ಚಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read