ತಮಿಳುನಾಡಿನ ಕಾಂಚೀಪುರಂನಲ್ಲಿರುವ ಏಕಾಂಬರೇಶ್ವರ ದೇವಾಲಯವು ಪಂಚಭೂತ ತತ್ವಗಳಿಂದ ಆಧಾರಿತವಾಗಿದೆ. ಶಿವನಿಗಾಗಿ ನಿರ್ಮಾಣವಾದ ಐದು ದೇವಾಲಯಗಳಲ್ಲಿ ಇದು ಒಂದು. ಇಲ್ಲಿರುವ ಶಿವ ಭೂ ತತ್ವದ ಪ್ರತೀಕ. ಈ ದೇವಾಲಯವನ್ನು ಏಕಾಂಬರೇಶ್ವರ ಎಂದೂ ಕರೆಯುತ್ತಾರೆ.
ಈ ದೇವಾಲಯದ ನೆಲಮಮಾಳಿಗೆಯಲ್ಲಿ ಲಕ್ಷಾಂತರ ವರ್ಷದ ಇತಿಹಾಸದ ದಾಖಲೆ ಇದೆ ಎಂದು ಜರ್ಮನಿ ಲೇಖಕರು ಹೇಳಿದ್ದಾರೆ. ಸಿಟಿ ಆಫ್ ಸಿಲ್ಕ್ ಎಂದೇ ಪ್ರಸಿದ್ದಿ ಹೊಂದಿರುವ ಈ ನಗರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.
ದೇಶದೆಲ್ಲೆಡೆ ಶಿವನಿಗೆ ಅಭಿಷೇಕ ಮಾಡುವುದಂಟು. ಆದರೆ ಇಲ್ಲಿ ಮಾತ್ರ ಶಿವನಿಗೆ ಅಭಿಷೇಕವಿಲ್ಲ. ಇಡೀ ದೇಶದಲ್ಲಿ ಅಭಿಷೇಕ ನಡೆಯದ ಏಕೈಕ ಶಿವ ದೇವಾಲಯ ಅಂದರೆ ಅದು ಏಕಾಂಬರೇಶ್ವರ ಸನ್ನಿಧಿ ಮಾತ್ರ. ಕಂಚಿಯ ಪೃಥ್ವಿ ಲಿಂಗಕ್ಕೆ ಏಕಾಂಬರೇಶ್ವರ ಎಂದು ಹೆಸರು ಬರುವುದಕ್ಕೆ ಅಲ್ಲಿರುವ ಮಾವಿನ ಮರ ಕಾರಣ. ಯಾಕೆಂದರೆ ಏಕ ಎಂದರೆ ಒಂದು ಆಮ್ರ ಎಂದರೆ ಮಾವು. ಒಂದೇ ಒಂದು ಮಾವು ಬಿಡುವ ಕಾರಣ ಶಿವನನ್ನು ಇಲ್ಲಿ ಏಕಾಂಬರೇಶ್ವರ ಎಂದು ಕರೆಯುತ್ತಾರೆ. ವೇದವೃಕ್ಷ ಅಂತಾ ಕರೆಯಲ್ಪಡುವ ಈ ಮಾವಿನ ಮರಕ್ಕೆ ನಾಲ್ಕೇ ನಾಲ್ಕು ಕೊಂಬೆಗಳಿದ್ದು ನಾಲ್ಕು ವೇದಗಳನ್ನು ಸೂಚಿಸುತ್ತದೆ.