ಸಂತಸದ ನಗರಿ ಕೋಲ್ಕತ್ತಾದ ಸುಂದರ ವಿಡಿಯೋವೊಂದನ್ನು ಆರ್‌ಪಿಜಿ ಸಮೂಹದ ಚೇರ್ಮನ್ ಹರ್ಷ್ ಗೋಯೆಂಕಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ತನ್ನ ವೈವಿಧ್ಯಮಯ ಸಂಸ್ಕೃತಿ, ಇತಿಹಾಸ, ಆಹಾರಗಳಿಂದ ತನ್ನದೇ ಗುರುತು ಹೊಂದಿರುವ ಕೋಲ್ಕತ್ತಾವನ್ನು ಭಾವನಾತ್ಮಕವಾಗಿ ಕಟ್ಟಿಕೊಡುವ ಈ ವಿಡಿಯೋ ನೆಟ್ಟಿಗರ ಬಳಗದಲ್ಲಿ ಭಾರೀ ವೈರಲ್ ಆಗಿದೆ.
ಮಾರುಕಟ್ಟೆಗಳಿಂದ ಹಿಡಿದು ಹೂಗ್ಲಿ ನದಿಯ ದಂಡೆಗಳವರೆಗೂ; ಮೈದಾನದಿಂದ ಹಿಡಿದು ಹೌರಾ ಸೇತುವೆವರೆಗೂ ನಗರದ ವಿವಿಧ ಆಯಾಮಗಳನ್ನು ರಸವತ್ತಾಗಿ ಕಟ್ಟಿಕೊಡುವ ಈ ವಿಡಿಯೋ ತಮ್ಮ ತವರು ನಗರದಲ್ಲಿ ತಾವು ಬೆಳದು ಬಂದ ಸುಂದರ ಕ್ಷಣಗಳನ್ನು ನೆನಪಿಸುತ್ತಿದೆ ಎನ್ನುತ್ತಾರೆ ಗೋಯೆಂಕಾ.
ಈ ವಿಡಿಯೋಗೆ ಸುಂದರವಾದ ಹಾಡೊಂದರ ಬ್ಯಾಕ್ ಗ್ರೌಂಡ್ ಸಂಗೀತವಿದ್ದು, ನೆಟ್ಟಿಗರು ಕೋಲ್ಕತ್ತಾವನ್ನು ಎರಡೂವರೆ ನಿಮಿಷಗಳ ಈ ವಿಡಿಯೋದಲ್ಲಿ ಕಣ್ತುಂಬಿಕೊಂಡು ಸಂತಸ ಪಡುತ್ತಿದ್ದಾರೆ.
https://twitter.com/hvgoenka/status/1643628769842720776?ref_src=twsrc%5Etfw%7Ctwcamp%5Etweetembed%7Ctwterm%5E1643628769842720776%7Ctwgr%5E1c6f4c7c44791af532680b58a45cde1e16b146da%7Ctwcon%5Es1_&ref_url=https%3A%2F%2Fwww.news18.com%2Fbuzz%2Fharsh-goenkas-nostalgic-video-will-make-you-book-tickets-to-kolkata-right-now-7479193.html
https://twitter.com/hvgoenka/status/1643628769842720776?ref_src=twsrc%5Etfw%7Ctwcamp%5Etweetembed%7Ctwterm%5E16436448
https://twitter.com/PaushaliSahu/status/1643637745116430336?ref_src=twsrc%5Etfw%7Ctwcamp%5Etweetembed%7Ctwter