ಎಂಆರ್‌ಐ ಸ್ಕ್ಯಾನಿಂಗ್‌ಗೆ ಒಳಗಾದ ಪ್ರತಿಯೊಬ್ಬರಿಗೂ ಇದೆಂಥ ನೋವಿನ ಅನುಭವವಾಗಬಲ್ಲದು ಎಂದು ತಿಳಿದೇ ಇರುತ್ತದೆ. ಕೊಳವೆಯೊಳಗೆ ಹೋದ ಮೇಲೆ ಅದರೊಳಗೆ ಮೂಡಿ ಬರುವ ಭಾರೀ ಸದ್ದುಗಳನ್ನು ಸಹಿಸಿಕೊಂಡು ಇರುವುದೆಂದರೆ ಎಂಥವರಿಗೂ ಕಿರಿಕಿರಿ ಎನಿಸುತ್ತದೆ.
ಮಕ್ಕಳಿಗೆ ಎಂಆರ್‌ಐ ಸ್ಕ್ಯಾನಿಂಗ್ ಮಾಡುವುದು ಭಾರೀ ಸವಾಲಿನ ಕೆಲಸ. ಎಂಆರ್‌ಐ ಸ್ಕ್ಯಾನಿಂಗ್ ಅನ್ನು ಮಕ್ಕಳಿಗೆ ಇನ್ನಷ್ಟು ಸ್ನೇಹಿಯಾಗಿಸಲು ಅವರಿಗೆಂದೇ ವಿಶೇಷವಾದ ಎಂಆರ್‌ಐ ಯಂತ್ರಗಳನ್ನು ಆಸ್ಪತ್ರೆಗಳು ಪರಿಚಯಿಸುತ್ತಿವೆ.
ಇಂಥದ್ದೇ ಒಂದು ಎಂಆರ್‌ಐ ಸ್ಕ್ಯಾನಿಂಗ್ ಯಂತ್ರವೊಂದರ ಚಿತ್ರ ಶೇರ್ ಮಾಡಿದ ಉದ್ಯಮಿ ಹರ್ಷ್ ಗೋಯೆಂಕಾ, “ಮಕ್ಕಳ ಎಂಆರ್‌ಐ ಸ್ಕ್ಯಾನರ್. ಬಹಳ ಚಿಂತನಶೀಲವಾದ ನಡೆ!” ಎಂದು ಕ್ಯಾಪ್ಷನ್ ಹಾಕಿದ್ದಾರೆ. ಮಕ್ಕಳಿಗೆ ಇಷ್ಟವಾಗುವ ಥೀಂನಲ್ಲಿ ಚಿತ್ರಗಳನ್ನು ಬಿಡಿಸಲಾದ ಎಂಆರ್‌ಐ ಯಂತ್ರದ ಚಿತ್ರವೊಂದನ್ನು ಗೋಯೆಂಕಾ ಶೇರ್ ಮಾಡಿದ್ದಾರೆ.