ಹಲವಾರು ಪ್ರಸಿದ್ಧ ವ್ಯಕ್ತಿಗಳು ಮತ್ತು ಯಶಸ್ವಿ ವ್ಯಾಪಾರ ಸಾಮ್ರಾಜ್ಯಗಳನ್ನು ಹೊಂದಿರುವ ಬಿಲಿಯನೇರ್‌ಗಳು ತಮ್ಮ ಭಾಷಣಗಳಲ್ಲಿ ಶಿಕ್ಷಣದ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ.
ಕಾಲೇಜಿನ ಶಿಕ್ಷಣವೇ ಇಲ್ಲದೇ ಹೇಗೆ ಪ್ರಸಿದ್ಧರಾಗಬಹುದು ಎಂಬುದಕ್ಕೆ ಹಲವಾರು ಉದ್ಯಮಿಗಳು, ಗಣ್ಯ ವ್ಯಕ್ತಿಗಳು ಸಾಕ್ಷಿಯಾಗಿದ್ದಾರೆ. ಇದೀಗ ನಂ.1 ಶ್ರೀಮಂತ ಎಂದು ಎನಿಸಿಕೊಳ್ಳುವ ಉದ್ಯಮಿ ಎಲಾನ್ ಮಸ್ಕ್ ಅವರ ವಿಡಿಯೋ ಒಂದು ವೈರಲ್ ಆಗಿದೆ.
ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು 2020 ರಲ್ಲಿ ತಮ್ಮ ಭಾಷಣವೊಂದರಲ್ಲಿ ಇದನ್ನು ಉಲ್ಲೇಖಿಸಿದ್ದು, ಅದರ ವಿಡಿಯೋ ಪುನಃ ಶೇರ್ ಆಗಿದೆ. ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಆ ವಿಡಿಯೋ ಹಂಚಿಕೊಂಡಿದ್ದಾರೆ.
ವಿಡಿಯೋ ಮೂಲತಃ ವಾಷಿಂಗ್ಟನ್ DC ಯಲ್ಲಿ ನಡೆದ ಉಪಗ್ರಹ 2020 ಸಮ್ಮೇಳನದಿಂದ ಬಂದಿದೆ. ಕಾಲೇಜು ಪದವಿ ಹೇಗೆ ಅಗತ್ಯವಿಲ್ಲ ಎಂಬುದರ ಕುರಿತು ಇವರು ಮಾತನಾಡಿದ್ದಾರೆ.
“ಕಾಲೇಜುಗಳು ವಿನೋದಕ್ಕಾಗಿ ಮತ್ತು ನಿಮ್ಮ ಕೆಲಸಗಳನ್ನು ನೀವು ಮಾಡಬಹುದು ಎಂದು ಸಾಬೀತುಪಡಿಸಲು ಇವೆ, ಆದರೆ ಅವು ಕಲಿಕೆಗಾಗಿ ಅಲ್ಲ” ಎಂದು ವಿಡಿಯೋದಲ್ಲಿ ಮಸ್ಕ್ ಹೇಳಿದ್ದಾರೆ. “ಕಾಲೇಜುಗಳು ಕಲಿಯಲು ಅಲ್ಲ ~ ಎಲೋನ್ ಮಸ್ಕ್” ಎಂಬ ಶೀರ್ಷಿಕೆಯೊಂದಿಗೆ ಇದರ ವಿಡಿಯೋ ವೈರಲ್ ಆಗಿದೆ.
ವಿಡಿಯೋವು 23 ಸಾವಿರ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಜನರಿಂದ ವಿಭಿನ್ನ ಅಭಿಪ್ರಾಯಗಳನ್ನು ಪಡೆದುಕೊಂಡಿದೆ. ಟ್ವಿಟರ್‌ನ ಒಂದು ಭಾಗವು ಮಸ್ಕ್ ಅವರ ಅಭಿಪ್ರಾಯವನ್ನು ಬೆಂಬಲಿಸಿದರೆ, ಇತರರು ಯುವ ಪೀಳಿಗೆಗೆ ಇದು ಕೆಟ್ಟ ಸಲಹೆ ಎಂದು ಕಮೆಂಟ್ ಮಾಡಿದ್ದಾರೆ.