ಬೆಂಗಳೂರು: ಲ್ಯಾಪ್ಟಾಪ್ ರಿಪೇರಿ ನೆಪದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಸಾದ್ ಬಾಬು(31) ಬಂಧಿತ ಆರೋಪಿ. ಕೇರಳ ಮೂಲದ 19 ವರ್ಷದ ವಿದ್ಯಾರ್ಥಿನಿ ಬೆಂಗಳೂರಿನ ಪಿಜಿಯೊಂದರಲ್ಲಿ ವಾಸವಾಗಿದ್ದು, ಆಟೋಮೋಟಿವ್ ಟೆಕ್ನಾಲಜಿ ಓದುತ್ತಿದ್ದಾರೆ. ಏಪ್ರಿಲ್ 22ರಂದು ರಾತ್ರಿ 8 ಗಂಟೆ ಸುಮಾರಿಗೆ ಬೊಮ್ಮನಹಳ್ಳಿಯ ಎಸ್.ಎಲ್.ವಿ. ಟೆಕ್ನಾಲಜಿಸ್ ಮಳಿಗೆಗೆ ಲ್ಯಾಪ್ಟಾಪ್ ರಿಪೇರಿ ಮಾಡಿಸಲು ಬಂದಿದ್ದಾರೆ.
ಲ್ಯಾಪ್ಟಾಪ್ ರಿಪೇರಿ ಮಾಡುವ ನೆಪದಲ್ಲಿ ಆರೋಪಿ ವಿದ್ಯಾರ್ಥಿನಿಯನ್ನು ಹತ್ತಿರಕ್ಕೆ ಕರೆದು ಖಾಸಗಿ ಭಾಗ ಮುಟ್ಟಿ ದೌರ್ಜನ್ಯ ಎಸಗಿದ್ದಾನೆ. ವಿದ್ಯಾರ್ಥಿನಿ ವಿರೋಧ ವ್ಯಕ್ತಪಡಿಸಿದರೂ ಅಸಭ್ಯವಾಗಿ ವರ್ತಿಸಿದ್ದೇನೆ. ವಿದ್ಯಾರ್ಥಿನಿ ಪಿಜಿಗೆ ವಾಪಸ್ ಆಗಿ ಗೆಳತಿಯರಿಗೆ ವಿಷಯ ತಿಳಿಸಿದ್ದು, ಏಪ್ರಿಲ್ 24ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.