86 ವರ್ಷಗಳ ಬಳಿಕ ಪ್ರತ್ಯೇಕ ಜಾತಿಯ ಪಟ್ಟಿ ಸೇರಿದ ಹನುಮಾನ್ ಹೆಸರಿನ ಪಕ್ಷಿ

ಭಾರತ ಹಾಗೂ ಶ್ರೀಲಂಕಾಗಳಲ್ಲಿ ಕಂಡು ಬರುವ ಹನುಮಾನ್ ಪ್ಲೋವರ್‌ ಹೆಸರಿನ ಪಕ್ಷಿಗೆ ಉಪ ಜಾತಿಯಿಂದ ಜಾತಿ ಪಟ್ಟಿಗೆ ಮರಳಿ ಸೇರಿಸಲಾಗಿದೆ. ಈ ಮೂಲಕ ಈ ಪಕ್ಷಿಗಳ ಸಂರಕ್ಷಣೆಗೆ ಇನ್ನಷ್ಟು ಹೆಚ್ಚಿನ ಗಮನ ನೀಡಬಹುದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಹಿಂದೂ ದೇವತೆ ಹನುಮಂತನ ಹೆಸರಿನಲ್ಲಿ ಕರೆಯಲಾಗುವ ಈ ಪಕ್ಷಿ ಬೆಳ್ಳಗಿದ್ದು ಸಣ್ಣನೆಯ ಆಕೃತಿ ಹೊಂದಿದೆ. 1930ರ ವೇಳೆ ಕೆಂಟಿಶ್ ಪ್ಲೋವರ್‌ ಹಾಗೂ ಹನುಮಾನ್ ಪ್ಲೋವರ್‌ಗಳನ್ನು ಒಂದೇ ಎಂದು ಪರಿಗಣಿಸಲಾಗಿತ್ತು. ಆದರೆ ಡಿಎನ್‌ಎ ಸೀಕ್ವೆನ್ಸಿಂಗ್‌ ಬಲದಿಂದ ಈ ಪಕ್ಷಿಗಳ ನಡುವಿನ ಅತ್ಯಲ್ಪ ವ್ಯತ್ಯಾಸಗಳನ್ನು ಗುರುತಿಸಿ ಪ್ರತ್ಯೇಕಿಸಲಾಗಿತ್ತು. ಇದೀಗ 86 ವರ್ಷಗಳ ಬಳಿಕ ಹನುಮಾನ್ ಪ್ಲೋವರ್‌‌ ಅನ್ನು ಪ್ರತ್ಯೇಕ ಜಾತಿ ಪಟ್ಟಿಗೆ ಸೇರಿಸಲಾಗಿದೆ.

ಜೌಗು ಪ್ರದೇಶಗಳಲ್ಲಿ ಕಾಣಸಿಗುವ ಈ ಪಕ್ಷಿಗಳನ್ನು ಸಂರಕ್ಷಿಸಲು ಇನ್ನಷ್ಟು ಹೆಚ್ಚಿನ ನಿಧಿಯನ್ನು ಇನ್ನು ಮುಂದೆ ಪಡೆಯಬಹುದು ಎಂಬ ವಿಶ್ವಾಸವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read