ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ಶೋನಲ್ಲಿ ದೇಶ – ವಿದೇಶಗಳ ಲೋಹದ ಹಕ್ಕಿಗಳ ಕಲರವ ಅತ್ಯಂತ ಯಶಸ್ವಿಯಾಗಿದೆ. ಇದರ ಮಧ್ಯೆ ಎಚ್ಎಎಲ್ ನಿರ್ಮಿತ HLFT-40 ವಿಮಾನದ ಮೇಲೆ ಹಾಕಲಾಗಿದ್ದ ‘ಹನುಮಾನ್’ ಚಿತ್ರವನ್ನು ತೆಗೆದು ಹಾಕಿದ್ದು ಚರ್ಚೆಗೆ ಕಾರಣವಾಗಿತ್ತು.
ಇದಕ್ಕೆ ಸ್ಪಷ್ಟನೆ ನೀಡಿದ್ದ ಆಯೋಜಕರು ಜಾತಿ, ಧರ್ಮ, ಪಂಥದ ಭೇದವಿಲ್ಲದೆ ಏರ್ ಶೋ ನಡೆಯುತ್ತಿರುವ ಕಾರಣ ಇದನ್ನು ತೆಗೆದು ಹಾಕಲಾಗಿದೆ ಎಂದು ಸಮರ್ಥಿಸಿಕೊಂಡಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
HLFT-40 ವಿಮಾನ ಅತ್ಯಂತ ಪ್ರಭಾವಶಾಲಿ ಆಗಿದ್ದ ಕಾರಣ ಅದಕ್ಕೆ ಮಾರುತ್ ಅರ್ಥಾತ್ ಗಾಳಿ (ಪವನ) ಎಂಬುದನ್ನು ಸಂಕೇತಿಸಲಾಗಿತ್ತು. ಪವನ ಪುತ್ರನಾದ ಹನುಮಾನ್ ಹೆಸರನ್ನು ಇದಕ್ಕೆ ಇಡಲಾಗಿದ್ದು, ಇದೀಗ ಈ ವಿಮಾನಗಳ ಮೇಲೆ ಮತ್ತೆ ಹನುಮಾನ್ ಚಿತ್ರ ರಾರಾಜಿಸಿದೆ.