ಹನುಮ ಜಯಂತಿ : ನಾಳೆ ಹುಣಸೂರು ನಗರದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಮೈಸೂರು : ಹನುಮ ಜಯಂತಿ ಆಚರಣೆ ಹಿನ್ನೆಲೆ ನಾಳೆ ಹುಣಸೂರು ನಗರದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಮೈಸೂರು ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ , ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗೃತಾ ಕ್ರಮವಾಗಿ ರಜೆ ಘೋಷಿಸಲಾಗಿದೆ, ಭಾನುವಾರ ಸರ್ಕಾರಿ ರಜೆ ಹಾಗೂ ಸೋಮವಾರ ಕ್ರಿಸ್ ಮಸ್ ಇರುವುದರಿಂದ ಅಂದು ಕೂಡ ಸರ್ಕಾರಿ ರಜೆ, ಮಂಗಳವಾರ ರಜೆ ಕೊಟ್ಟಿದ್ದು ಮಕ್ಕಳಿಗೆ 3 ದಿನ ರಜೆ ಸಿಕ್ಕಂತಾಗಿದೆ.

ಕರ್ನಾಟಕದೆಲ್ಲೆಡೆ ಭಾನುವಾರ ಹನುಮ ಜಯಂತಿಯ ಸಡಗರ ಮನೆ ಮಾಡಿತ್ತು, ದೇವರಿಗೆ ಎಲ್ಲೆಡೆ ವಿಶೇಷ ಅಲಂಕಾರ, ಪೂಜೆ, ಹೋಮ ಹವನಗಳ ಕೈಂಕರ್ಯ ನಡೆದಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read