ಕಳ್ಳರು, ಖದೀಮರು ಪೊಲೀಸರಿಗೆ ಚಳ್ಳೆಹಣ್ಣು ತಿನ್ಸೋದನ್ನ ನೋಡಿರ್ತಿರಾ. ಇದೆಲ್ಲ ಸಿನೆಮಾದಲ್ಲಿ ಮಾತ್ರ ಸಾಧ್ಯ ಆಗೋದು ಅಂತ ಅಂದ್ಕೊಳ್ಳಬೇಡಿ. ಸಿನೆಮಾಗಳಲ್ಲಿ ನಾವು ನೋಡೋ ಈ ರೀತಿಯ ಘಟನೆಗಳಲ್ಲಿ ವಾಸ್ತವದಲ್ಲಿ ನಡೆದಿರುವಂತಹ ಘಟನೆಗಳಾಗಿದೆ. ಈಗ ಅಮೆರಿಕಾದಲ್ಲೂ ಅಂತಹದ್ದೇ ಘಟನೆಯೊಂದು ಕ್ಯಾಮರಾ ಕಣ್ಣಿಗೆ ಬಿದ್ದಿದೆ.
20 ಸೆಕೆಂಡ್‌ನ ಈ ವಿಡಿಯೋನಲ್ಲಿ ಕಳ್ಳನೊಬ್ಬ ಪೊಲೀಸ್ ಕಾರ್ ಹೊರಗೆ ಬರುತ್ತಿರುವುದನ್ನ ಗಮನಿಸಬಹುದು. ಆತನ ಕೈಗೆ ಕೊಳ ಹಾಕಲಾಗಿದೆ. ಆದರೂ ಆತ ಕಾರ್ ಕಿಟಕಿಯಿಂದ ಹೊರಗೆ ಬರುವುದಕ್ಕೆ ಪ್ರಯತ್ನಿಸುತ್ತಾನೆ. ಆ ಸಮಯದಲ್ಲಿ ಆತನ ಅದೃಷ್ಟ ಕೈಕೊಟ್ಟಿತ್ತೊ ಏನೋ. ಆತ ಹರಸಾಹಸ ಪಟ್ಟು ಹೊರಗೆ ಬ೦ದರೂ ರಸ್ತೆ ಮೇಲೆ ನಡೆಯೋಕಾಗದೇ ಬಿದ್ದೇ ಬಿಟ್ಟಿದ್ದ. ಕೊನೆಗೆ ಪೊಲೀಸ್ ತನ್ನ ಕಾರು ನಿಲ್ಲಿಸಿ, ಆ ಕೈದಿಯನ್ನ ಕಾರಿನಲ್ಲಿ ತೂರಿ ಬಾಗಿಲು ಹಾಗೂ ಕಿಟಕಿಯನ್ನ ಲಾಕ್ ಮಾಡಿದ್ದಾನೆ.
ಇದನ್ನ ಅಲ್ಲೇ ಇದ್ದ ಇನ್ನೊಂದು ಕಾರ್‌ನಲ್ಲಿದ್ದ ಕ್ಯಾಮರಾ ರೆಕಾರ್ಡ್ ಮಾಡಿದೆ. ಕೈದಿ ಎಸ್ಕೆಪ್ ಮಾಡಲು ಮಾಡಿದ್ದ ಪ್ಲಾನ್ ಪ್ಲಾಪ್ ಆಗಿದೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ಅಮೆರಿಕಾದ ಕಾಲಿಫೋರ್ನಿಯಾದಲ್ಲಿ, ನೆಟ್ಟಿಗರು ಈ ವಿಡಿಯೋ ನೋಡಿ ಪೊಲೀಸರ ಕಾರ್ಯಕ್ಷಮತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಈ ಘಟನೆಯನ್ನ ಲೇವಡಿ ಮಾಡಿದ್ದಾರೆ. ಓರ್ವ ವ್ಯಕ್ತಿಯಂತೂ ‘ರಜಾ ಸಮಯದಲ್ಲಿ ನನ್ನ ಬಾಸ್ ನನ್ನಿಂದ ಇದೇ ರೀತಿ ಕೆಲಸ ಮಾಡಿಸಿಕೊಳ್ತಾರೆ’ ಎಂದು ತಮಾಷೆ ಮಾಡಿ ತಮ್ಮ ದುಃಖ ಹೇಳಿಕೊಂಡಿದ್ದಾರೆ.