ಇಸ್ರೇಲ್ ಅನ್ನು ‘M90 ರಾಕೆಟ್’ಗಳೊಂದಿಗೆ ಹಮಾಸ್ ಗುರಿಯಾಗಿಸಿದ್ದು, ಟೆಲ್ ಅವೀವ್‌ನಲ್ಲಿ ಸ್ಫೋಟಗಳು ಕೇಳಿಬಂದಿವೆ. ಹಮಾಸ್ ನ ಸಶಸ್ತ್ರ ಅಲ್-ಕಸ್ಸಾಮ್ ಬ್ರಿಗೇಡ್‌ಗಳು ಮಂಗಳವಾರ ಇಸ್ರೇಲಿ ನಗರವಾದ ಟೆಲ್ ಅವಿವ್ ಮತ್ತು ಅದರ ಉಪನಗರಗಳನ್ನು ಎರಡು “M90” ರಾಕೆಟ್‌ಗಳ ಮೂಲಕ ಗುರಿಯಾಗಿಸಿಕೊಂಡಿದೆ ಎಂದು ಹೇಳಿದ್ದಾರೆ.
ಸ್ವಲ್ಪ ಸಮಯದ ಹಿಂದೆ ಒಂದು ಉಡಾವಣೆಯು ಗಾಜಾ ಪಟ್ಟಿಯ ಪ್ರದೇಶವನ್ನು ದಾಟಿ ದೇಶದ ಮಧ್ಯಭಾಗದಲ್ಲಿರುವ ಸಮುದ್ರದ ಜಾಗಕ್ಕೆ ಬಿದ್ದಿರುವುದು ಪತ್ತೆಯಾಗಿದೆ. ಅದೇ ಸಮಯದಲ್ಲಿ ಮತ್ತೊಂದು ಉಡಾವಣೆ ಮಾಡಿದ್ದು, ಅದು ಇಸ್ರೇಲ್ ಒಳಗೆ ದಾಟಲಿಲ್ಲ ಎಂದು.ಇಸ್ರೇಲಿ ಏರ್ ಫೋರ್ಸ್ ಹೇಳಿದೆ.
ಟೆಲ್ ಅವಿವ್‌ನಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.
ಇಸ್ರೇಲ್ ಮತ್ತು ಮಧ್ಯವರ್ತಿಗಳೊಂದಿಗೆ ಈಗಾಗಲೇ ಚರ್ಚಿಸಲಾದ ಒಪ್ಪಂದದ ಮೇಲೆ ಗಾಜಾ ಕದನ ವಿರಾಮ ಮಾತುಕತೆಗಳು ಗಮನಹರಿಸಬೇಕೆಂಬ ತನ್ನ ಬೇಡಿಕೆಗೆ ಹಮಾಸ್ ಅಂಟಿಕೊಳ್ಳುತ್ತಿದೆ. ಏತನ್ಮಧ್ಯೆ, ಮಂಗಳವಾರ ಮಧ್ಯ ಮತ್ತು ದಕ್ಷಿಣ ಗಾಜಾ ಪಟ್ಟಿಯಲ್ಲಿ ಇಸ್ರೇಲಿ ವೈಮಾನಿಕ ದಾಳಿಯಲ್ಲಿ 19 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಗುರುವಾರ ನಡೆಯಲಿರುವ ಶಾಂತಿ ಮಾತುಕತೆಗಳು ಯೋಜಿಸಿದಂತೆ ಮುಂದುವರಿಯುವ ನಿರೀಕ್ಷೆಯಿದೆ. ಕದನ ವಿರಾಮ ಒಪ್ಪಂದ ಇನ್ನೂ ಸಾಧ್ಯ ಎಂದು ಯುಎಸ್ ಸೋಮವಾರ ಹೇಳಿದೆ. ಕತಾರ್, ಈಜಿಪ್ಟ್ ಮತ್ತು ಇಸ್ರೇಲ್‌ನಲ್ಲಿ ಚರ್ಚಿಸಲು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮಂಗಳವಾರ ತೆರಳಲು ಯೋಜಿಸಿದ್ದಾರೆ ಎಂದು ಆಕ್ಸಿಯೋಸ್ ವರದಿ ಮಾಡಿದೆ.
ಇಸ್ರೇಲಿ ಸರ್ಕಾರವು ಗುರುವಾರದ ಮಾತುಕತೆಗೆ ನಿಯೋಗವನ್ನು ಕಳುಹಿಸುವುದಾಗಿ ಹೇಳಿದೆ. ಆದರೆ, ಯುದ್ಧದ ಮೊದಲು ಗಾಜಾವನ್ನು ಮುನ್ನಡೆಸಿದ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್, ಮಾತುಕತೆಗಳಿಗಿಂತ ಈಗಾಗಲೇ ಒಪ್ಪಿಕೊಂಡಿರುವ ಪ್ರಸ್ತಾಪವನ್ನು ಕಾರ್ಯಗತಗೊಳಿಸಲು ವಿನಂತಿಸಿದೆ.