ಬೆಂಗಳೂರು: ಮಹಿಳೆ ಕಿಡ್ನ್ಯಾಪ್ ಕೇಸ್ ನಲ್ಲಿ ಜೈಲು ಸೇರಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ಮುಕ್ತಯಗೊಂಡಿದ್ದು, ಆದರೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಕುರಿತ ಆದೇಶವನ್ನು ಕಾಯ್ದಿರಿಸಿದೆ.
ಮಹಿಳೆಯ ಕಿಡ್ನ್ಯಾಪ್ ಕೇಸ್ ನಲ್ಲಿ ಜೈಲುಪಾಲಾಗಿರುವ ಹೆಚ್.ಡಿ.ರೇವಣ್ಣ ಜಾಮೀನು ಕೋರಿ ಬೆಂಗಳೂರಿನ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು ಬೆಳಿಗ್ಗೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್ ಮಧ್ಯಾಹ್ನ 12:45 ಅರ್ಜಿ ವಿಚಾರಣೆ ಮುಂದೂಡಿತ್ತು. ಬಳಿಕ ನಡೆದ ವಿಚಾರಣೆಯಲ್ಲಿ ಹೆಚ್.ಡಿ.ರೇವಣ್ಣ ಹಾಗೂ ಎಸ್ ಐಟಿ ಪರ ಇಬ್ಬರು ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಮಧ್ಯಾಹ್ನ 2:35ಕ್ಕೆ ಮುಂದೂಡಿತ್ತು. ಮತ್ತೆ ವಿಚಾರಣೆ ನಡೆದು ಎರಡೂ ಕಡೆ ವಕೀಲರ ವಾದ-ಪ್ರತಿ ವಾದ ಆಲಿಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್, ಜಾಮೀನು ಕುರಿತ ಆದೇಶವನ್ನು ಕಾಯ್ದಿರಿಸಿದ್ದಾರೆ.
ಸಾಧ್ಯವಾದರೆ ಇಂದು ಸಂಜೆ 5 ಗಂಟೆಯೊಳಗೆ ಆದೇಶ ಪ್ರಕಟಿಸಲು ಯತ್ನಿಸುವುದಾಗಿ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಜಾಮೀನು ಸಿಗಲಿದೆಯೇ? ಅಥವಾ ಜೈಲಿವಾಸವೇ ಮುಂದುವರೆಯಲಿದೆಯೇ ಎಂಬುದು ಕೆಲ ಹೊತ್ತಲ್ಲೇ ಪ್ರಕಟವಾಗಲಿದೆ.
.