ಕಾಂಬೋಡಿಯಾದ ಆಂಗ್ ಕರ್ ವಾಟ್ ದೇವಾಲಯದಲ್ಲಿ ಕುಮಾರಸ್ವಾಮಿ; ಮಾಜಿ ಸಿಎಂನ್ನು ಮಂತ್ರಮುಗ್ಧಗೊಳಿಸಿದ ಜಗತ್ತಿನ ಬೃಹತ್ ಹಿಂದೂ ದೇವಾಲಯ

ಬೆಂಗಳೂರು: ಯುರೋಪ್ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿದ್ದ ಮಾಜಿ ಸಿಎಂ ಹೆಚ್.ಡಿ.ಕುಮರಸ್ವಾಮಿ ಮತ್ತೆ ವಿದೇಶ ಪ್ರವಾಸಕ್ಕೆ ತೆರಳಿದ್ದು, ಈಬಾರಿ ಕಾಂಬೋಡಿಯಾದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

ಕೆಲ ರಾಜಕೀಯ ಸ್ನೇಹಿತರೊಂದಿಗೆ ವಿದೇಶ ಪ್ರವಾಸ ಕೈಗೊಂಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಕಾಂಬೋಡಿಯಾದ ಪ್ರಸಿದ್ಧ ಆಂಗ್ ಕರ್ ವಾಟ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಮಾಜಿ ಸಿಎಂ ಕುಮರಸ್ವಾಮಿ, ಕಾಂಬೋಡಿಯಾ ದೇಶದ ಐತಿಹಾಸಿಕ ಆಂಗ್ ಕರ್ ವಾಟ್ ದೇವಾಲಯಕ್ಕೆ ನಿನ್ನೆ ಭೇಟಿ ನೀಡಿದ್ದೆ. ಜಗತ್ತಿನಲ್ಲಿಯೇ ಬೃಹತ್ ಹಿಂದೂ ದೇವಾಲಯದಲ್ಲಿ ಬಹಳ ಹೊತ್ತು ಇದ್ದೆ. ಸುಮಾರು 402 ಎಕರೆ ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ದೇವಾಲಯ ನನ್ನನ್ನು ಮಂತ್ರಮುಗ್ಧಗೊಳಿಸಿತು ಎಂದು ಬರೆದುಕೊಂಡಿದ್ದಾರೆ.

ಕುಟುಂಬ ಸಮೇತ ವಿದೇಶ ಪ್ರವಾಸಕ್ಕೆ ತೆರಳಿದ್ದ ಕುಮಾರಸ್ವಾಮಿ ಕೆಲ ದಿನಗಳ ಹಿಂದಷ್ಟೇ ವಾಪಸ್ ಆಗಿದ್ದರು. ಎರಡು ದಿನಗಳ ಬಳಿಕ ರಾಜಕೀಯ ಸ್ನೇಹಿತರೊಂದಿಗೆ ಕಾಂಬೋಡಿಯಾ ಪ್ರವಾಸಕ್ಕೆ ತೆರಳಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read