ನನ್ನ ವಿರುದ್ಧದ ಪ್ರಕರಣದ ತನಿಖೆಗೆ ಪ್ರಾಸಿಕ್ಯೂಷನ್ ಅನುಮತಿಯೇ ಬೇಡ ಎಂದ ಕೇಂದ್ರ ಸಚಿವ ಕುಮಾರಸ್ವಾಮಿ

ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ಮೇಲಿನ ಕೇಸ್ ಗಳ ತನಿಖೆಗೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿಲ್ಲ ಎಂಬ ಆಡಳಿತ ಪಕ್ಷ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ನನ್ನ ಮೇಲಿನ ಕೇಸ್ ಗೆ ಪ್ರಾಸಿಕ್ಯೂಷನ್ ಅನುಮತಿಯೇ ಬೇಡ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ನನ್ನ ವಿರುದ್ಧದ ಕೇಸ್ ಗೆ ತನಿಖೆಗೆ ಅನುಮತಿ ಅಗತ್ಯವಿಲ್ಲ. ನನ್ನನ್ನು ಹೆದರಿಸಿಸಲು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಿ ಎಂದು ಸಿಎಂ ಹಾಗೂ ಮಂತ್ರಿಗಳು ಕೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

150 ಕೋಟಿ ಜಂತಕಲ್ ಮೈನಿಂಗ್ ಕೇಸ್ ಈಗಾಗಲೇ ಹೈಕೋರ್ಟ್ ನಲ್ಲಿ ವಜಾ ಆಗಿದೆ. ಸಾಯಿ ವೆಂಕಟೇಶ್ವರ ಕೇಸ್ ತನಿಖೆ ಮಾಡಿ ಎಂದಿದ್ದಾರೆ. ಅಬ್ರಾಹಂ ಅವರು 2011ರಲ್ಲಿ ನನ್ನ ವಿರುದ್ಧ ಹಾಗೂ ಎಸ್.ಎಂ.ಕೃಷ್ಣ, ಧರ್ಮ ಸಿಂಗ್ ವಿರುದ್ಧ ಸುಪ್ರೀಂ ಕೋರ್ಟ್ ಗೆ ದೂರು ನೀಡಿದ್ದರು. ಎಸ್.ಎಂ.ಕೃಷ್ಣ ಅವರು ಸ್ಟೇ ತಂದರು. ಧರ್ಮಸಿಂಗ್ ಅವರು ಈಗ ಇಲ್ಲ. ಎಸ್ ಐಟಿ ತಂಡ ಮೂರು ತಿಂಗಳಲ್ಲಿ ತನಿಖಾ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಅದೇಶ ನೀಡಿತ್ತು. ಈಗ 2024 ಸುಪ್ರೀಂ ಕೋರ್ಟ್ ಗೆ ನೀವು ಹೋಗಬೇಡಿ ಎಂದು ನಿಮ್ಮನ್ನು ಹಿಡಿದುಕೊಂಡಿದ್ದು ಯಾರು? ಸುಪ್ರೀಂ ಕೋರ್ಟ್ ಗೆ ಹೋಗಿ. ಇದಕ್ಕೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಿ ಎಂದು ರಾಜ್ಯಪಾಲರ ಮುಂದೆ ಡ್ರಾಮಾ ಮಾಡುವುದು ಯಾಕೆ? ಎಂದು ಪ್ರಶ್ನಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read