ತಮ್ಮ ಕಾರಿನ ಗಾಜಿನ ಮೇಲೆ ‘ಜೈ ಮಾತಾ ದಿ’ ಸ್ಟಿಕ್ಕರ್ ಅನ್ನು ಪ್ರದರ್ಶಿಸಿದ ಚಾಲಕನಿಗೆ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಟ್ರಾಫಿಕ್ ಕಾನ್‌ಸ್ಟೆಬಲ್ ಒಬ್ಬರು ದಂಡ ವಿಧಿಸಿದ್ದಾರೆ. ಇದರಿಂದ ಕುಪಿತಗೊಂಡ ಹಿಂದು ಸಂಘಟನೆ ಕಾರ್ಯಕರ್ತರು ಕಾನ್ ಸ್ಟೇಬಲ್ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಇಬ್ಬರ ನಡುವಿನ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಹಿಂದೂ ರಕ್ಷಾ ದಳದ ರಾಷ್ಟ್ರೀಯ ಅಧ್ಯಕ್ಷರಾದ ಪಿಂಕಿ ಚೌಧರಿ ಟ್ರಾಫಿಕ್ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದ್ದಾರೆ .
ಪಿಂಕಿ ಚೌಧರಿ, ಕಾನ್ ಸ್ಟೇಬಲ್ ಗೆ ಮೇಲಧಿಕಾರಿಗಳನ್ನು ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಸಂಪರ್ಕಿಸುವಂತೆ ಸವಾಲು ಹಾಕಿದ್ದಾರೆ. ಘಟನೆಯನ್ನು ದಾಖಲಿಸಲು ಬಳಸುತ್ತಿದ್ದ ಕಾನ್ಸ್ ಟೇಬಲ್‌ನ ಮೊಬೈಲ್ ಫೋನ್ ಅನ್ನು ಕಿತ್ತುಕೊಳ್ಳುವ ಪ್ರಯತ್ನವನ್ನೂ ಮಾಡಿದ್ದಾರೆ.
ವಾಹನಗಳ ಮೇಲೆ ಧಾರ್ಮಿಕ ಅಥವಾ ಜಾತಿ ನಿರ್ದಿಷ್ಟ ಸ್ಟಿಕ್ಕರ್‌ಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸುವ ಮೋಟಾರು ವಾಹನ ಕಾಯ್ದೆಗೆ ಬದ್ಧವಾಗಿ ದಂಡ ವಿಧಿಸಲಾಗಿದೆ.
ಚೌಧರಿ, ವಾಹನದ ಚಾಲಕ ಮತ್ತು ಸರಿಸುಮಾರು ಎರಡು ಡಜನ್ ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ IPC 146 (ಬಲ ಅಥವಾ ಹಿಂಸಾಚಾರದ ಬಳಕೆ), 148 (ಗಲಭೆ), 322 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) 353 (ಸಾರ್ವಜನಿಕ ಸೇವಕನ ಕರ್ತವ್ಯಕ್ಕೆ ಅಡ್ಡಿಪಡಿಸುವುದು), 504 (ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), ಮತ್ತು 506 (ಅಪರಾಧ ಬೆದರಿಕೆ) ಸೇರಿದಂತೆ ಹಲವು ಆರೋಪ ಹೊರಿಸಲಾಗಿದೆ.
https://twitter.com/AsianDigest/status/1708723351429005409?ref_src=twsrc%5Etfw%7Ctwcamp%5Etweetembed%7Ctwterm%5E1708723351429005409%7Ctwgr%5E425ba1f4a3fb8068d76c88e8ea11b547a88a3cc3%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fnews18-epaper-dh523feb6a21f54358acc1d5d04a629da5%2Fgzbruckusafterconstablefinescarforjaimatadistickerhindugroupconfrontscopwatchnow-newsid-n543533938