
ಹುಬ್ಬಳ್ಳಿ: ಜಾತಿ ಕಾರಣಕ್ಕಾಗಿ ನಾಗ್ಪುರ ಆರ್.ಎಸ್.ಎಸ್ ಹೆಡಗೇವಾರ್ ಸ್ಮಾರಕ ಕಟ್ಟಡಕ್ಕೆ ನನಗೆ ಪ್ರವೇಶ ನಿರಾಕರಿಸಲಾಗಿತ್ತು ಎಂಬ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಕ್ಕೆ ಈಗ ಆಪ್ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕೂಡ ಧ್ವನಿಗೂಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಆಪ್ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಗೂಳಿಹಟ್ಟಿ ಶೇಖರ್ ಹೇಳಿರುವ ಅನುಭವ ನನಗೂ ಆಗಿದೆ. ನಾನೂ ಬಿಜೆಪಿಯಲ್ಲಿ ಇದ್ದು ಬಂದವನು ಎಂದು ಹೇಳುವ ಮೂಲಕ ಗೂಳಿಹಟ್ಟಿ ಶೇಖರ್ ಗೆ ಸಾಥ್ ನೀಡಿದ್ದಾರೆ.
ಬಿಜೆಪಿಯಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ, ಆಹ್ವಾನವೂ ಇರಲಿಲ್ಲ. ಗೂಳಿಹಟ್ಟಿ ಶೇಖರ್ ಹೇಳಿಕೆ ನಂತರ ಮನವರಿಕೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.