ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರಿಗೆ ಕೌನ್ಸೆಲಿಂಗ್ ಹಾಜರಾಗದೆ 2024 -25 ನೇ ಶೈಕ್ಷಣಿಕ ಸಾಲಿನಲ್ಲಿ ಅದೇ ಸ್ಥಳಗಳಲ್ಲಿ ಮುಂದುವರೆಯಲು ಉನ್ನತ ಶಿಕ್ಷಣ ಇಲಾಖೆಯಿಂದ ಅವಕಾಶ ನೀಡಲಾಗಿದೆ.
2023 -24ನೇ ಸಾಲಿನ ಅವಧಿ ಬಹುತೇಕ ಕಾಲೇಜುಗಳಲ್ಲಿ ಮುಕ್ತಾಯವಾಗಿದೆ. ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಮತ್ತೆ ಅವರು ಅರ್ಜಿ ಸಲ್ಲಿಸಬೇಕಿದೆ. ಈಗಾಗಲೇ ಕೆಲಸ ಮಾಡುತ್ತಿರುವ ಕಾಲೇಜುಗಳಲ್ಲಿ ಮುಂದುವರೆಯಲು ಬಯಸುವವರು ತಾವು ಸಲ್ಲಿಸುವ ಅರ್ಜಿಯಲ್ಲಿಯೇ ಹಾಲಿ ಕೆಲಸ ಮಾಡುತ್ತಿರುವ ಸ್ಥಳ ನಮೂದಿಸಿದರೆ ಸಾಕು, ಅಂತವರು ಕೌನ್ಸೆಲಿಂಗ್ ನಲ್ಲಿ ಭಾಗವಹಿಸುವ ಅಗತ್ಯವಿರುವುದಿಲ್ಲ.
ಅತಿಥಿ ಉಪನ್ಯಾಸಕರು ಕೆಲಸ ಮಾಡುವ ಕಾಲೇಜುಗಳಲ್ಲಿ ಕಾಯಂ ಅಧ್ಯಾಪಕರು ನೇಮಕವಾಗಿ ಅಥವಾ ವರ್ಗಾವಣೆಗೊಂಡು ಬಂದಾಗ ಬೋಧನೆ ಅವಧಿ ಕಡಿಮೆಯಾದಲ್ಲಿ ಅಂತಹ ಕಾಲೇಜುಗಳ ಅತಿಥಿ ಉಪನ್ಯಾಸಕರು ಕೌನ್ಸೆಲಿಂಗ್ ನಲ್ಲಿ ಭಾಗವಹಿಸಿ ಬೋಧನಾ ಅವಧಿ ಇರುವ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.