ವಿಮಾನದಲ್ಲಿ ಕೊಟ್ಟ ಊಟದಲ್ಲಿತ್ತು ಕೂದಲು: ಸಂಸದೆ ಕೆಂಡಾಮಂಡಲ

ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ಅವರು ಮಂಗಳವಾರ ಎಮಿರೇಟ್ಸ್ ಏರ್‌ಲೈನ್ಸ್‌ನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತನಗೆ ಬಡಿಸಿದ ಆಹಾರದಲ್ಲಿ ಕೂದಲಿನ ಎಳೆಗಳು ಕಂಡುಬಂದಿವೆ ಎಂದು ನಟಿ-ರಾಜಕಾರಣಿಯಾಗಿರುವ ಮಿಮಿ ಚಕ್ರವರ್ತಿ ದೂರಿದ್ದಾರೆ. ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಅದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಏರ್‌ಲೈನ್ಸ್‌ನ ಕಸ್ಟಮರ್ ಕೇರ್ ಅನ್ನು ಟ್ಯಾಗ್ ಮಾಡುವ ಮೂಲಕ ಮಿಮಿ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹೀಗೆ ಬರೆದಿದ್ದಾರೆ, ಆತ್ಮೀಯ ಎಮಿರೇಟ್ಸ್, ಪ್ರಯಾಣಿಕರ ಬಗ್ಗೆ ನೀವು ಕಡಿಮೆ ಕಾಳಜಿ ವಹಿಸಿದ್ದೀರಿ. ಈ ವಿಚಾರದಲ್ಲಿ ತುಂಬಾ ದೊಡ್ಡದಾಗಿ ಬೆಳೆದಿದ್ದೀರಿ ಎಂದು ನಾನು ಭಾವಿಸುತ್ತೇನೆ. ಆದರೆ ನಿಮ್ಮ ಬುದ್ಧಿವಂತಿಕೆಯನ್ನು ಕಡಿಮೆ ಮಾಡಿ. ಊಟದಲ್ಲಿ ಕೂದಲು ಸಿಗುವುದು ಸಮಾಧಾನದ ವಿಷಯವಲ್ಲ. ನಾನು ಆಹಾರ ಅಗೆಯುವಾಗಲೇ ಕೂದಲು ಸಿಕ್ಕಿದೆ ಎಂದು ಕಿಡಿಕಾರಿದ್ದು, ನಾನು ಈಗಾಗಲೇ ಎಲ್ಲಾ ವಿವರಗಳನ್ನು ಸಂಬಂಧಪಟ್ಟ ವಿಮಾನ ಸೇವಾ ಪ್ರತಿನಿಧಿಗಳಿಗೆ ಮೇಲ್ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಟ್ವೀಟ್ ವೈರಲ್ ಆದ ನಂತರ, ಎಮಿರೇಟ್ಸ್ ಘಟನೆಗೆ ಕ್ಷಮೆಯಾಚಿಸಿದೆ. ಮಿಮಿ ಚಕ್ರವರ್ತಿ ಪಶ್ಚಿಮ ಬಂಗಾಳದ ಜಾದವ್‌ಪುರ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಸಂಸದರಾಗಿದ್ದಾರೆ. ಬಂಗಾಳಿ ಸಿನಿಮಾ ಮತ್ತು ದೂರದರ್ಶನದಲ್ಲಿಯೂ ಕೆಲಸ ಮಾಡಿದ್ದಾರೆ. ಅವರು ಕೊನೆಯ ಬಾರಿಗೆ ಅರಿಂದಮ್ ಸಿಲ್ ನಿರ್ದೇಶನದ ‘ಖೇಲಾ ಜಾವ್ಖೋನ್’ ಎಂಬ ಥ್ರಿಲ್ಲರ್ ಚಿತ್ರದಲ್ಲಿ ಕಾಣಿಸಿಕೊಂಡರು.

https://twitter.com/mimichakraborty/status/1628089819359494144

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read