ಕೇರಳದ ತ್ರಿಶೂರ್ ಮೆಡಿಕಲ್ ಕಾಲೇಜ್ ಬಳಿಯ ದಿನಸಿ ಅಂಗಡಿಯೊಂದರ ಮಾಲೀಕ ವಸ್ತುಗಳನ್ನು ಖರೀದಿಸಲು ಬಂದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು ಚಪ್ಪಲಿ ಏಟು ತಿಂದಿದ್ದಾನೆ. ಅಂಗಡಿ ಮಾಲೀಕ ಅಲಿ ಎಂಬಾತ ಸಾಮಗ್ರಿ ಖರೀದಿಸಲು ಬಂದಿದ್ದ ಯುವತಿಯೊಬ್ಬಳ ಎದೆ ಮುಟ್ಟಿದ್ದಾನೆ. ಇದರಿಂದ ಕೆರಳಿದ ಹುಡುಗಿಯರು ಆತನನ್ನ ತರಾಟೆಗೆ ತೆಗೆದುಕೊಂಡರು. ಅಂಗಡಿ ಮಾಲೀಕನಿಗೆ ಹುಡುಗಿಯರು ಸಿಟ್ಟಿನಿಂದ ಚಪ್ಪಲಿಸೇವೆ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡು ಟೀಕಿಗೆ ಕಾರಣವಾಗಿದೆ.
ಹಗಲು ವೇಳೆ ಸಾರ್ವಜನಿಕ ಸ್ಥಳದಲ್ಲೇ ಈ ಘಟನೆ ನಡೆದಿದ್ದು ಯುವತಿಯರು ಹಿಂಜರಿಯದೇ ಧೈರ್ಯ ತೋರಿ ಅಂಗಡಿ ಮಾಲೀಕನಿಗೆ ತಕ್ಕ ಶಿಕ್ಷೆ ನೀಡಿದ್ದಾರೆ. ಹುಡುಗಿಯರ ಧೈರ್ಯವನ್ನು ಮೆಚ್ಚಿರೋ ನೆಟ್ಟಿಗರು ವ್ಯಕ್ತಿಯ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
https://twitter.com/ManojSh28986262/status/1834970729244151997?ref_src=twsrc%5Etfw%7Ctwcamp%5Etweetembed%7Ctwterm%5E1834970729244151997%7Ctwgr%5E15ab468b