ನವದೆಹಲಿ: ಸರ್ಕಾರದ ತಾಂತ್ರಿಕ ವ್ಯವಸ್ಥೆಯು ಪ್ರತಿದಿನ 1.35 ಕೋಟಿ ಮೋಸದ ಕರೆಗಳನ್ನು ಯಶಸ್ವಿಯಾಗಿ ನಿರ್ಬಂಧಿಸುತ್ತಿದೆ. 2,500 ಕೋಟಿ ರೂ. ಮೌಲ್ಯದ ಆಸ್ತಿಯನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಹೆಚ್ಚಿನ ಸ್ಪ್ಯಾಮ್ ಕರೆಗಳು ಸಾಗರೋತ್ತರ ಸರ್ವರ್ ಗಳಿಂದ ಬರುತ್ತಿವೆ ಮತ್ತು ಈ ಮೋಸದ ಪ್ರಯತ್ನಗಳನ್ನು ತಡೆಯುವಲ್ಲಿ ಸರ್ಕಾರದ ವ್ಯವಸ್ಥೆಗಳು ಹೆಚ್ಚು ಪರಿಣಾಮಕಾರಿಯಾಗಿವೆ ಎಂದು ತಿಳಿಸಿದ್ದಾರೆ.
ಮಾರ್ಕೆಟಿಂಗ್ ಮತ್ತು ವಂಚನೆ ಕರೆಗಳನ್ನು ನಿಭಾಯಿಸಲು ನಾವು ಸಮಗ್ರ ವ್ಯವಸ್ಥೆಯನ್ನು ಸ್ಥಾಪಿಸಿದ್ದೇವೆ. ನಮ್ಮ ದೂರಸಂಪರ್ಕ ಇಲಾಖೆ(DoT) ವಂಚನೆ ಪತ್ತೆ ಜಾಲದ ಮೂಲಕ, ಸಂಚಾರ ಸತಿ ಮತ್ತು ಚಕ್ಷುಗಳಂತಹ ಸಾಧನಗಳ ಮೂಲಕ ನಾವು ಈಗಾಗಲೇ 2,500 ಕೋಟಿ ಜನರ ಆಸ್ತಿಯನ್ನು ಉಳಿಸಿದ್ದೇವೆ ಎಂದು ಹೇಳಿದರು.
ಇರುವ ವ್ಯವಸ್ಥೆಗಳು ಸುಮಾರು 2,90,000 ಫೋನ್ ಸಂಖ್ಯೆಗಳ ಸಂಪರ್ಕ ಕಡಿತಕ್ಕೆ ಕಾರಣವಾಗಿವೆ. ಮೋಸದ ಸಂದೇಶಗಳನ್ನು ಕಳುಹಿಸಲು ಬಳಸಿದ ಸುಮಾರು 1.8 ಮಿಲಿಯನ್ ಹೆಡರ್‌ಗಳನ್ನು ನಿರ್ಬಂಧಿಸಲಾಗಿದೆ.
ತಮ್ಮ ಸಂಖ್ಯೆಗಳನ್ನು ಭಾರತೀಯ (+91) ಫೋನ್ ಸಂಖ್ಯೆಗಳಂತೆ ಮರೆಮಾಚಲು ಸಾಗರೋತ್ತರ ಸರ್ವರ್‌ಗಳನ್ನು ಬಳಸುವುದು ಪ್ರಮುಖ ಸಮಸ್ಯೆಯಾಗಿದೆ. ಇದನ್ನು ಎದುರಿಸಲು, ಸರ್ಕಾರವು ಪ್ರತಿದಿನ ಸರಾಸರಿ 13.5 ಮಿಲಿಯನ್ ಇಂತಹ ಮೋಸದ ಕರೆಗಳನ್ನು ನಿರ್ಬಂಧಿಸುವ ಸಾಫ್ಟ್‌ವೇರ್ ಅನ್ನು ಜಾರಿಗೆ ತಂದಿದೆ. ಸರ್ಕಾರವು ಕಾನೂನು ಜಾರಿ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳನ್ನು ಸಂಯೋಜಿಸುವ ಹೊಸ ಸಾಫ್ಟ್‌ವೇರ್ ಅನ್ನು ಪರಿಚಯಿಸಿದೆ ಎಂದರು.