ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಸ್ತುತ ವಿನಿಮಯ ದರ ಮತ್ತು ಸಾರ್ವಜನಿಕ ಖಾತೆ ಮತ್ತು ಇತರ ಹೊಣೆಗಾರಿಕೆಗಳ ಮೌಲ್ಯದ ಬಾಹ್ಯ ಸಾಲ ಸೇರಿದಂತೆ ಅದರ ಸಾಲವು 185 ಲಕ್ಷ ಕೋಟಿ ರೂಪಾಯಿಗಳಿಗೆ ಅಥವಾ ಜಿಡಿಪಿಯ ಶೇಕಡಾ 56.8 ಕ್ಕೆ ಹೆಚ್ಚಾಗುತ್ತದೆ ಎಂದು ಸರ್ಕಾರ ಅಂದಾಜಿಸಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಸಾಲದ ಮೊತ್ತ 185 ಲಕ್ಷ ಕೋಟಿ ರೂಪಾಯಿ ಏರಿಕೆಯಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ.
ಲೋಕಸಭೆಗೆ ನೀಡಿದ ಉತ್ತರದಲ್ಲಿ ಸಚಿವರು ಈ ಬಗ್ಗೆ ಮಾಹಿತಿ ನೀಡಿದ್ದು, ದೇಶದ ಸಾಲದ ಮೊತ್ತ 185 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದನ್ನು ಒಟ್ಟು ಜಿಡಿಪಿ ಲೆಕ್ಕದಲ್ಲಿ ಹೇಳುವುದಾದರೆ ಜಿಡಿಪಿಯ ಶೇಕಡ 56.8ರಷ್ಟು ಆಗುತ್ತದೆ ಎಂದು ತಿಳಿಸಿದ್ದಾರೆ.
2024ರ ಮಾರ್ಚ್ ಅಂತ್ಯದ ವೇಳೆಗೆ ದೇಶದ ಒಟ್ಟು ಸಾಲ 171.78 ಲಕ್ಷ ಕೋಟಿ ರೂ. ಅಥವಾ ಜಿಡಿಪಿಯ ಶೇಕಡ 58.2ರಷ್ಟು ಇತ್ತು. ಐಎಂಎಫ್ ಮತ್ತು ವರ್ಲ್ಡ್ ಎಕಾನಮಿಕ್ ಔಟ್ ಲುಕ್ ಪ್ರಕಾರ, 2023 -24ರಲ್ಲಿ ಭಾರತದ ಜಿಡಿಪಿ 3.57 ಟ್ರಿಲಿಯನ್ ಡಾಲರ್ ಗೆ ತಲುಪಿದೆ ಎಂದು ಹೇಳಿದ್ದಾರೆ.