ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಕೆಲಸ: 7ನೇ ವೇತನ ಆಯೋಗಕ್ಕೆ ಮನವಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಮಾತ್ರ ಸರ್ಕಾರಿ ಕೆಲಸ, ವಾರಾಂತ್ಯ ಎರಡು ದಿನ ರಜೆ ನೀಡುವಂತೆ ಕೋರಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮತ್ತು ಪದಾಧಿಕಾರಿಗಳ ನಿಯೋಗದ ವತಿಯಿಂದ 7ನೇ ವೇತನ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ.

ವಾರಕ್ಕೆ ಐದು ದಿನ ಕೆಲಸ ಪದ್ಧತಿ ಕೆಲಸದ ಅವಧಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5:30 ಬದಲಿಗೆ ಬೆಳಗ್ಗೆ 9:30 ರಿಂದ ಸಂಜೆ 6 ಗಂಟೆಯವರೆಗೆ ಬದಲಿಸಬೇಕು ಎಂದು ಬೇಡಿಕೆಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಲಾಗಿದೆ.

ದೈನಂದಿನ ಕರ್ತವ್ಯದ ಅವಧಿ ಹೆಚ್ಚಳ ಮಾಡಿ ವಾರದಲ್ಲಿ ಐದು ದಿನ ಕೆಲಸ, ಎರಡು ದಿನ ರಜೆ ನೀಡುವ ಪದ್ಧತಿ, ಜಾರಿಗೆ ಕೋರಲಾಗಿದೆ. ನೌಕರರಲ್ಲಿ ದಕ್ಷತೆ, ನೈಪುಣ್ಯತೆ, ಕ್ರಿಯಾಶೀಲತೆ ಹೆಚ್ಚಳಕ್ಕೆ ತರಬೇತಿ ನೀಡಬೇಕು. ಮೂಲವೇತನಕ್ಕೆ ಹಾಲಿ ಇರುವ ಶೇಕಡ 31 ರಷ್ಟು ತುಟ್ಟಿಭತ್ಯೆ ವಿಲೀನಗೊಳಿಸಿ ಶೇಕಡ 40ರಷ್ಟು ಫಿಟ್ಮೆಂಟ್ ಸೌಲಭ್ಯ 2022ರ ಜುಲೈ 1 ರಿಂದ ಜಾರಿಗೆ ತರಬೇಕು.

ಕೇಂದ್ರ ಸರ್ಕಾರದ ಮಾದರಿಯಲ್ಲಿ 4 ವರ್ಷಕ್ಕೊಮ್ಮೆ ಎಲ್.ಟಿ.ಸಿ. ಸೌಲಭ್ಯ, ದಿನದ ಬಗ್ಗೆ ನೀಡಬೇಕು. ಆರೋಗ್ಯ ಸಂಜೀವಿನಿ ಯೋಜನೆ ವ್ಯಾಪ್ತಿಗೆ ವಿವಾಹಿತ ಮಹಿಳಾ ನೌಕರರ ತಂದೆ, ತಾಯಿ ಸೇರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read