ನವದೆಹಲಿ: ಹೊಸ ಯುಗದ ಪ್ರಭಾವಿಗಳು, ಕ್ರಿಯೇಟರ್ಸ್ ಗಳನ್ನು ಗುರುತಿಸಲು ರಾಷ್ಟ್ರೀಯ ಕ್ರಿಯೇಟರ್ಸ್ ಪ್ರಶಸ್ತಿ(National creators’ awards) ಗಳನ್ನು ಘೋಷಿಸಲು ಸರ್ಕಾರ ಸಜ್ಜಾಗಿದೆ.
ಮೊದಲ-ರೀತಿಯ ಪ್ರಶಸ್ತಿಗಳನ್ನು “Gen Z” ಅನ್ನು ಗುರಿಯಾಗಿರಿಸಿಕೊಳ್ಳಲಾಗುತ್ತದೆ. ಇದು ಯುವ ಪೀಳಿಗೆಯನ್ನು ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಕ್ಕೆ ಕೊಂಡಿಯಾಗಿರಿಸಿಕೊಂಡಿದ್ದು, ಸುಮಾರು 20 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಅವರು ಹೇಳಿದರು.
ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿರುತ್ತಾರೆ. ದೇಶದ ಸಾಫ್ಟ್ ಪವರ್ ಮತ್ತು ಸಂಸ್ಕೃತಿಯನ್ನು ಅಂತರಾಷ್ಟ್ರೀಯವಾಗಿ ಹರಡಲು ಸಹಾಯ ಮಾಡಿದವರಿಗೆ ಒಂದು ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುತ್ತದೆ.
ಇತರ ವಿಭಾಗಗಳು “ಗ್ರೀನ್ ಚಾಂಪಿಯನ್ಸ್”, “ಸ್ವಚ್ಛತಾ ರಾಯಭಾರಿಗಳು”, “ಕೃಷಿ ಸೃಷ್ಟಿಕರ್ತರು” ಮತ್ತು “ಟೆಕ್ ಕ್ರಿಯೇಟರ್ಸ್” ಅನ್ನು ಒಳಗೊಂಡಿರಬಹುದು ಎಂದು ಮೂಲಗಳು ತಿಳಿಸಿವೆ. ವಿವಿಧ ಭಾಷೆ ಮತ್ತು ವಿಭಾಗಗಳ ಚಲನಚಿತ್ರಗಳನ್ನು ಗುರುತಿಸುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಮಾದರಿಯಲ್ಲಿ ಪ್ರಶಸ್ತಿಗಳು ಇರುತ್ತವೆ ಎಂದು ಹೇಳಲಾಗಿದೆ.