ಬೆಂಗಳೂರು: 7ನೇ ವೇತನ ಆಯೋಗ ವರದಿ ಜಾರಿ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯ ಸರ್ಕಾರ 2024- 25 ನೇ ಸಾಲಿಗೆ ನೌಕರರ ವೇತನ ಬಾಬ್ತಿಗೆ ಹೆಚ್ಚುವರಿಯಾಗಿ 15,431 ಕೋಟಿ ಅನುದಾನ ಹಂಚಿಕೆ ಮಾಡಿದೆ.
ವೇತನ, ಪಿಂಚಣಿ ಬಾಬ್ತಿಗೆ ಹೆಚ್ಚುವರಿ ಹಣ ನಿಗದಿ ಮಾಡಿದ್ದು, 80,434 ಕೋಟಿ ರೂ. ವಿನಿಯೋಗಕ್ಕೆ ಯೋಜನೆ ರೂಪಿಸಲಾಗಿದೆ. ಇದರೊಂದಿಗೆ 7ನೇ ವೇತನ ಆಯೋಗದ ಜಾರಿ ನಿರೀಕ್ಷೆ ಹೆಚ್ಚಾಗಿದೆ.
2024 -25 ರಲ್ಲಿ ವೇತನ ಬಾಬ್ತಿಗೆ 80,434 ಕೋಟಿ ಅನುದಾನ ವಿನಿಯೋಗಿಸುವುದಾಗಿ ಅಂದಾಜಿಸಲಾಗಿದ್ದು, ಮುಂದಿನ ವರ್ಷ ನೌಕರರ ವೇತನಕ್ಕೆ ಹೆಚ್ಚುವರಿಗಾಗಿ 15,431 ಕೋಟಿ ರೂ. ವೆಚ್ಚ ಮಾಡುವುದಾಗಿ ಉಲ್ಲೇಖಿಸಲಾಗಿದೆ. ಪಿಂಚಣಿ ಬಾಬ್ತಿಗೆ 22,670 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ. ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಗೆ ಹೆಚ್ಚುವರಿ ಹಣ ಕಾಯ್ದಿರಿಸಿದ್ದು ವೇತನ ಆಯೋಗ ವರದಿ ಅನುಷ್ಠಾನದ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.