ಇಡೀ ಪ್ರಪಂಚದಲ್ಲಿ ನೆಲ್ಲಿಕಾಯಿಯಲ್ಲಿ ಇರುವಷ್ಟು ವಿಟಮಿನ್ ಸಿ ಯಾವ ಆಹಾರ ಪದಾರ್ಥದಲ್ಲೂ ಇಲ್ಲ. ನಿರ್ದಿಷ್ಟ ಕಾಲಾವಧಿಯಲ್ಲಿ ಮಾತ್ರ ಸಿಗುವ ನೆಲ್ಲಿಕಾಯಿಯನ್ನು ಎಚ್ಚರದಿಂದ ತೆಗೆದಿಟ್ಟರೆ ವರ್ಷ ಪೂರ್ತಿ ಬಳಸಬಹುದು.
ನೆಲ್ಲಿಕಾಯಿಗೆ ತುಸು ಉಪ್ಪು ಉದುರಿಸಿ ತಿನ್ನುವುದರಿಂದ ಗಂಟಲು ಕೆರೆಯುವುದು ದೂರವಾಗುತ್ತದೆ. ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಕಾಡುವ ಜ್ವರ, ನೆಗಡಿ, ತಲೆನೋವು, ಹಿಮ್ಮಡಿ ಒಡೆಯುವುದು, ಅಜೀರ್ಣ, ವಾತ, ಕಫ, ಪಿತ್ತ ಇರುವುದು ಸಾಮಾನ್ಯ.
ಆಗ ನೆಲ್ಲಿಕಾಯಿಯನ್ನು ಪ್ರತಿ ದಿನದ ಆಹಾರದಲ್ಲಿ ಬಳಸುವುದರಿಂದ ಈ ಸಮಸ್ಯೆಗಳು ದೂರವಾಗುತ್ತದೆ. ನೆಲ್ಲಿಕಾಯಿಯನ್ನು ಊಟದೊಂದಿಗೆ, ಪಾನೀಯವಾಗಿ, ಜ್ಯಾಮ್ ರೂಪದಲ್ಲಿ, ಉಪ್ಪಿನಕಾಯಿಯಾಗಿ ಸೇವಿಸಿ ಲಾಭ ಪಡೆಯಬಹುದು.