ಬೇಸಿಗೆಯ ಬೇಗೆಗೆ ಮನೆಯ ವಾತಾವರಣ ತಂಪು ಮಾಡಲು ಏಸಿಗಳ ಬಳಕೆ ಹೆಚ್ಚಾದಂತೆ ವಿದ್ಯುತ್ ದರವೂ ಹೆಚ್ಚಾಗುತ್ತದೆ. ಇದರಿಂದ ಬೇಸಿಗೆಯ ಬಿಸಿ ತಪ್ಪಿಸಿಕೊಂಡರೂ ವಿದ್ಯುತ್ ಬಿಲ್‌ನ ಬಿಸಿ ನಮಗೆ ಬೆವರಿಳಿಸುತ್ತದೆ.
ಪ್ರತಿನಿತ್ಯ 14-15 ಗಂಟೆಗಳ ಕಾಲ ಏಸಿ ಬಳಸಿದ್ದೇ ಆದಲ್ಲಿ ಪ್ರತಿ ತಿಂಗಳು ವಿದ್ಯುತ್ ಬಳಕೆಯು ತಿಂಗಳಲ್ಲಿ 600 ಯೂನಿಟ್‌ಗಳಿಗೆ ಏರಿಕೆಯಾಗುತ್ತದೆ. ಒಂದು ಯೂನಿಟ್‌ಗೆ 8ರೂನಂತೆ ಆದರೂ ಮಾಸಿಕ ವಿದ್ಯುತ್ ಬಿಲ್ 4,800ರೂ. ನಷ್ಟಾಗುತ್ತದೆ.
ಈ ಸಮಸ್ಯೆಗೆ ಪರಿಹಾರವಾಗಿ ಬಂದಿರುವ ಸೋಲಾರ್ ಏಸಿ ಬಳಕೆಯಿಂದ ನಿಮ್ಮ ವಿದ್ಯುತ್ ಬಿಲ್‌ನಲ್ಲಿ ಭಾರೀ ಇಳಿಕೆಯಾಗಲಿದೆ. ಸೋಲಾರ್ ಏಸಿಗಳಿಗೆ ಆರಂಭದಲ್ಲಿ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಿ, ಬ್ಯಾಟರಿಗಳನ್ನು ಅಳವಡಿಸಿದರೆ 5-25 ವರ್ಷಗಳ ಮಟ್ಟಿಗೆ ನಿರ್ವಹಣಾ ಶುಲ್ಕವೂ ಬೇಕಾಗುವುದಿಲ್ಲ.
ಒಂದು ಟನ್ ಸಾಮರ್ಥ್ಯದ ಸೋಲಾರ್ ಏಸಿಯ ಬೆಲೆಯ ಒಂದು ಲಕ್ಷದಷ್ಟಿದ್ದು, 1.5 ಟನ್ ಏಸಿಯ ಬೆಲೆ ಎರಡು ಲಕ್ಷ ರೂ.ಗಳಷ್ಟಿದೆ. ಒಮ್ಮೆ ಇಷ್ಟು ಖರ್ಚು ಮಾಡಿದರೆ ಮುಂದಿನ 25 ವರ್ಷಗಳ ಮಟ್ಟಿಗೆ ಏಸಿಗಳು ಸೃಷ್ಟಿಸುವ ವಿದ್ಯುತ್ ಬಿಲ್‌ಗಳಿಂದ ಪಾರಾಗಬಹುದು.