ಬೆಂಗಳೂರು : ರಾಜ್ಯ ಸರ್ಕಾರವು ಪರಿಶಿಷ್ಟ ವರ್ಗದ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಮಹಿಳಾ ಸ್ವ ಸಹಯ ಗುಂಪುಗಳಿಗೆ (ಕನಿಷ್ಟ 10 ಸದಸ್ಯರು) ಕಿರು ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ ನೀಡಲಾಗುತ್ತಿದೆ.
ಘಟಕವೆಚ್ಚ ರೂ.2.50 ಲಕ್ಷಗಳನ್ನು ಮಂಜೂರು ಮಾಡಲಾಗುವುದು. ಇದರಲ್ಲಿ ರೂ.1.50 ಲಕ್ಷ ಸಹಾಯಧನ ರೂ.1 ಲಕ್ಷ ಸಾಲ ಕೊಡಲಾಗುವುದು(ಶೇ.4 ರಷ್ಟು ಬಡ್ಡಿ ದರ). ಅರ್ಜಿಯನ್ನು ಸೇವಾಸಿಂಧು ಪೋರ್ಟಲ್‌ನಲ್ಲಿ ಮಾತ್ರ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಅದರ ಸ್ವೀಕೃತಿಯನ್ನು ಫಲಾನುಭವಿಗಳು ತಮ್ಮ ಬಳಿ ಇಟ್ಟುಕೊಳ್ಳಬೇಕು. ಆ ಸ್ವೀಕೃತಿಯ ಯಾವುದೇ ಪ್ರತಿ ಹಾಗೂ ಯಾವುದೇ ದಾಖಲಾತಿಗಳನ್ನು ಜಿಲ್ಲಾ ಕಚೇರಿಗೆ ಸಲ್ಲಿಸುವ ಅಗತ್ಯವಿರುವುದಿಲ್ಲ.
ಮಂಡಳಿ ವಿವೇಚನಾ ಕೋಟಾ ಅಥವಾ ಸರಕಾರದ ಸಾಂಸ್ಥಿಕ ಕೋಟಾದಡಿ ಸ್ವೀಕರಿಸುವ ಅರ್ಜಿಗಳನ್ನು ಸಹ ಸುವಿಧಾ ಪೋರ್ಟಲ್ ಮೂಲಕವೇ ಮಾತ್ರ ಸಲ್ಲಿಸಬೇಕು. ವಿವಿಧ ನಿಗಮಗಳಿಗೆ ಸಂಬಂಧಪಡುವ ಜಾತಿಯ ಫಲಾನುಭವಿಗಳು ಆಯಾ ನಿಗಮದ ಅಡಿಯಲ್ಲಿ ಮಾತ್ರವೇ ಅರ್ಜಿ ಸಲ್ಲಿಸಬೇಕು. ಬೇರೆ ನಿಗಮದಡಿ ಅರ್ಜಿ ಸಲ್ಲಿಸಿದಲ್ಲಿ ಹಾಗೂ ಅಭ್ಯರ್ಥಿಯು ಸಲ್ಲಿಸಿರುವ ಅರ್ಜಿ ಆ ನಿಗಮದಡಿ ಬರದೇ ಇದ್ದಲ್ಲಿ ಅದಕ್ಕೆ ನಿಗಮವು ಜವಾಬ್ದಾರಿಯಾಗಿರುವುದಿಲ್ಲ.
ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು
ಆಧಾರ್ ಕಾರ್ಡ್
ರೇಷನ್ ಕಾರ್ಡ್
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಯೋಜನೆ ವಿವರ
ಪಾಸ್ಪೋರ್ಟ್ ಗಾತ್ರದ ಫೋಟೋ
ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು
ಅರ್ಜಿದಾರರು ಕರ್ನಾಟಕದ ನಿವಾಸಿ ಆಗಿರಬೇಕು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗುಂಪಿಗೆ ಸೇರಿದವರಾಗಿರಬೇಕು
ಅರ್ಜಿದಾರರ ಗ್ರಾಮೀಣ ಪ್ರದೇಶದವರಾಗಿದ್ದರೆ ವಾರ್ಷಿಕ ಆದಾಯ 1.5 ಲಕ್ಷ ಮೀರಿರಬಾರದು
ಅರ್ಜಿದಾರರು ಪಟ್ಟಣ ಪ್ರದೇಶದವರಾಗಿದ್ದರೆ ವಾರ್ಷಿಕ ಆದಾಯ 2 ಲಕ್ಷ ಮೀರಿರಬಾರದು
ಅರ್ಜಿದಾರರು ವಯಸ್ಸು 21ರಿಂದ 60 ವರ್ಷ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಯೋಜನೆಗಳ ಹೆಚ್ಚಿನ ಮಾಹಿತಿಗೆ ನಿಗಮದ ವೆಬ್ಸೈಟ್ https://adcl.karnataka.gov.in ಮೂಲಕ ಪಡೆದುಕೊಳ್ಳುವುದು. ಫಲಾಪೇಕ್ಷಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಮತ್ತು ದಾಖಲಾತಿಗಳನ್ನು ಸುವಿದಾ ತಂತ್ರಾಂಶದ ವೆಬ್ಸೈಟ್ ವಿಳಾಸ: https://sevasindhuservices.karnataka.gov.in ಮೂಲಕ ಅರ್ಜಿಗಳನ್ನು ಅಪ್ಲೋಡ್ ಮಾಡಲು ಡಿಸೆಂಬರ್, 15 ರವರೆಗೆ ಅವಧಿ ವಿಸ್ತರಿಸಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಒಂದು ಪ್ರತಿಯನ್ನು ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.