
ಬೆಂಗಳೂರು : ಮದುವೆಯಾಗುವವರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಸಪ್ತಪದಿ ಸರಳ ಸಾಮೂಹಿಕ ವಿವಾಹ ಯೋಜನೆಯ ಹೆಸರನ್ನು ಕಾಂಗ್ರೆಸ್ ಸರ್ಕಾರವು ಮಾಂಗಲ್ಯ ಭಾಗ್ಯ ಎಂದು ಬದಲಿಸಿ ರಾಜ್ಯದ ಎಲ್ಲಾ ದೇವಾಲಯಗಳಲ್ಲೂ ಯೋಜನೆ ಜಾರಿಗೆ ತರಲು ಮುಜರಾಯಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ರಾಜ್ಯದ ಬಡ ವರ್ಗದ ವಧು-ವರರ ಸರಳ ವಿವಾಹಕ್ಕೆ ಸಿದ್ದರಾಗಿರುವವರಿಗೆ ಅನ್ನಭಾಗ್ಯದಂತೆ ಮಾಂಗಲ್ಯ ಭಾಗ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಮಾಂಗಲ್ಯ ಭಾಗ್ಯ ಯೋಜನೆಯಡಿ ವರನಿಗೆ ಅಂಗಿ, ಧೋತಿ ಹಾಗೂ 5,000 ರೂ. ನಗದು ಮತ್ತು 8 ಗ್ರಾಂ. ಚಿನ್ನದ ತಾಳಿ ಗುಂಡುಗಳನ್ನು ನೀಡಲಾಗುತ್ತದೆ. ಜೊತೆಗೆ ರಾಜ್ಯದ ಎಲ್ಲಾ ಎ, ಬಿ ಗ್ರೇಡ್ ದೇವಾಲಯಗಳಲ್ಲಿ ಯೋಜನೆ ಜಾರಿಗೆ ತರಲಾಗುತ್ತಿದೆ.
2023 ರ ನವೆಂಬರ್, ಡಿಸೆಂಬರ್ ಮತ್ತು 2024 ರ ಜನವರಿಯಲ್ಲಿ ಸಾಮೂಹಿಕ ವಿವಾಹಕ್ಕಾಗಿ ವಧು-ವರರ ಹೆಸರು ನೋಂದಾಯಿಸಿಕೊಳ್ಳಲು ಸುತ್ತೋಲೆ ಹೊರಡಿಸಲಾಗಿದೆ. ನವೆಂಬರ್ ತಿಂಗಳಿನಲ್ಲಿ 16,19 ಮತ್ತು 29 ರಂದು ದಿನಾಂಕಗಳನ್ನು ಫಿಕ್ಸ್ ಮಾಡಲಾಗಿದೆ. ಡಿಸೆಂಬರ್ 7, 10 ರಂದು, 2024 ರ ಜನವರಿ 28 ಮತ್ತು 31 ರಂದು ದಿನಾಂಕಗಳನ್ನು ನಿಗದಿಪಡಿಸಲಾಗಿದೆ.