ರಾಜ್ಯ ಸಾರಿಗೆ ನೌಕರಿಗೆ ಭರ್ಜರಿ ಗುಡ್ ನ್ಯೂಸ್ : ಅಪಘಾತ ರಹಿತ ಚಾಲನೆಗಾಗಿ ಮಾಸಿಕ ಭತ್ಯೆ 10 ಪಟ್ಟು ಹೆಚ್ಚಳ!

ಧಾರವಾಡ : ರಾಜ್ಯ ಸಾರಿಗೆ ನೌಕರರಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಿಹಿಸುದ್ದಿ ನೀಡಿದ್ದು, ಅಪಘಾತ ರಹಿತ ಚಾಲನೆಗಾಗಿ ನೀಡುವ ಮಾಸಿಕ ಭತ್ಯೆಯನ್ನು 10 ಪಟ್ಟು ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವಂತಹ ಸಚಿವರು,ಚಿನ್ನದ ಪದಕ ವಿಜೇತರಿಗೆ ಮಾಸಿಕ ಭತ್ಯೆ ಪರಿಷ್ಕರಣೆ ಮಾಡಲಾಗಿದ್ದು ಐದು ವರ್ಷಗಳ ಅಪಘಾತ ರಹಿತ ಚಾಲನೆಗಾಗಿ ಬೆಳ್ಳಿ ಪದಕ ವಿಜೇತರಿಗೆ ನೀಡುವ ಮಾಸಿಕ ಭತ್ಯೆ ರು. 50ನ್ನು ಹತ್ತು ಪಟ್ಟು ಹೆಚ್ಚಿಸಿ ರು.500 ಮಾಸಿಕ ಭತ್ಯೆ ಪಾವತಿಗೆ ಅವಕಾಶ ಮಾಡಲಾಗುವುದು. ಹಾಗೆಯೇ 15 ವರ್ಷಗಳ ಅಪಘಾತ ರಹಿತ ಚಾಲನೆಗಾಗಿ ಮುಖ್ಯ ಮಂತ್ರಿಗಳ ಬಂಗಾರದ ಪದಕ ವಿಜೇತರಿಗೆ ಪ್ರಸ್ತುತ ಇರುವ ರು. 100 ಮಾಸಿಕ ಭತ್ಯೆಯನ್ನು ಹತ್ತು ಪಟ್ಟು ಹೆಚ್ಚಿಸಿ ರು. 1000ಕ್ಕೆ ಹೆಚ್ಚಿಸಲಾಗುವುದು. ಪ್ರಸ್ತುತ ಬೆಳ್ಳಿ ಪದಕ ಮತ್ತು ಚಿನ್ನದ ಪದಕ ವಿಜೇತರಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲ ಚಾಲಕ ಹಾಗೂ ಚಾಲಕ ಜೊತೆಗೆ ನಿರ್ವಾಹಕರಿಗೆ ಪರಿಷೃತ ಪ್ರಶಸ್ತಿ ಭತ್ಯೆ ಅನ್ವಯಿಸಿ ಪಾವತಿಗೆ ಅವಕಾಶ ಮಾಡಲಾಗುವುದು ಎಂದು ಸಚಿವರು ನುಡಿದರು.

ನೌಕರರು ಸಂಸ್ಥೆಯ ಸೇವೆಯಲ್ಲಿದ್ದಾಗ ಕರ್ತವ್ಯ ನಿರತ, ಖಾಸಗಿ ಅಪಘಾತದಿಂದ ಮೃತಪಟ್ಟಲ್ಲಿ ಮತ್ತು ಅಂಗನ್ಯೂನತೆಗಳಿಗೆ ಒಳಗಾದಲ್ಲಿ ಅವರ ಅವಲಂಬಿತರಿಗೆ, ನೌಕರರಿಗೆ ಗರಿಷ್ಠ ಮೊತ್ತದ ಆರ್ಥಿಕ ಸೌಲಭ್ಯ ಸಿಗುವ ಉದ್ದೇಶದಿಂದ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ ರವರೊಂದಿಗೆ ನೌಕರರಿಗೆ  ಸಿ.ಎಸ್.ಪಿ ಯೋಜನೆಯಡಿ ಅಪಘಾತ ವಿಮಾ ಸೌಲಭ್ಯವನ್ನು ಎಸ್.ಬಿ.ಐ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡು, ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

 ನೌಕರರು ಅಪಘಾತದಲ್ಲಿ  ಮೃತಪಟ್ಟಿಲ್ಲಿ ಅವರ ಅವಲಂಬಿತರಿಗೆ ಗರಿಷ್ಠ ರೂ, 50 ಲಕ್ಷ ಮೊತ್ತವನ್ನು ಪಾವತಿಸಲಾಗುತ್ತದೆ.  ಈ ಯೋಜನೆಯು ಜಾರಿಗೆ ಬಂದಾಗಿನಿಂದ ಸಂಸ್ಥೆಯಲ್ಲಿ 3 ಜನ ನೌಕರರು ಅಪಘಾತದಲ್ಲಿ ಮೃತಪಟ್ಟಿರುತ್ತಾರೆ.  ಮೃತಪಟ್ಟ ನೌಕರರ ಪೈಕಿ ದಿ|| ಎನ್ ಎಸ್ ಯಕ್ಕನ್ನವರ, ಚಾ/ನಿ, ಬೆಳಗಾವಿ ವಿಭಾಗ ಇವರ ಅವಲಂಬಿತರಿಗೆ ಅಪಘಾತ ವಿಮಾ ರೂ,50 ಲಕ್ಷ ಗಳ ಮೊತ್ತವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರವರು ಅವರ ಖಾತೆಗೆ ಜಮಾ ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read