ಬೆಂಗಳೂರು : ರಾಜ್ಯ ಸರ್ಕಾರವು ಗರ್ಭಿಣಿ ಮಹಿಳೆಯರು, ಬಾಣಂತಿಯರಿಗೆ ಸಿಹಿಸುದ್ದಿ ನೀಡಿದ್ದು, ಮಾತೃ ವಂದನ ಹಾಗೂ ಮಾತೃಪೂರ್ಣ ಯೋಜನೆಯನ್ನು ಸ್ಥಗಿತಗೊಳಿಸಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತೃ ವಂದನ ಹಾಗೂ ಮಾತೃಪೂರ್ಣ ಯೋಜನೆಗಳಿಗೆ ಬಜೆಟ್ ಅನುದಾನ ನೀಡಿಲ್ಲ ಎಂಬುದು ಸುಳ್ಳು, ಶಿಶು ಹಾಗೂ ಮಹಿಳೆಯರ ಪೌಷ್ಠಿಕತೆಯನ್ನು ನಮ್ಮ ಇಲಾಖೆಯ ಪ್ರಮುಖ ಉದ್ದೇಶ, ಇದು ಮುಂದುವರೆದ ಯೋಜನೆಗಳಾಗಿದ್ದು, ಬಜೆಟ್ ನಲ್ಲಿ ಪ್ರಸ್ತಾಪಿಸುವ ಅವಶ್ಯಕತೆ ಇರುವುದಿಲ್ಲ ಎಂದರು.
ಮಾತೃವಂದನಾ ಯೋಜನೆಯು ಕೇಂದ್ರ ಸರ್ಕಾರದ ಪ್ರಾಯೋಜಿತ ಡಿಬಿಟಿ ಯೋಜನೆ, ಈ ಯೋಜನೆಯಡಿ ನೇರವಾಗಿ ನಗದು ಪ್ರೋತ್ಸಾಹವನ್ನು ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರ ಬ್ಯಾಂಕ್ ಖಾತೆಗೆ ಬರಲಿದೆ. ಇಂತಹ ಯೋಜನೆಯನ್ನು ಸುಧಾರಿಸುತ್ತೇವೆ ಹೊರತು ಈ ಯೋಜನೆಯನ್ನು ಸ್ಥಗಿತಗೊಳಿಸಲ್ಲ ಎಂದು ಹೇಳಿದ್ದಾರೆ.