ಬೆಂಗಳೂರು : ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ, ಸಂಜೆ ಕಾಲೇಜು ಅತಿಥಿ ಉಪನ್ಯಾಸಕರಿಗೆ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಅಕ್ಟೋಬರ್ ತಿಂಗಳ ಗೌರವಧನ ಬಿಡುಗಡೆ ಮಾಡಲಾಗಿದೆ.
ಅತಿಥಿ ಉಪನ್ಯಾಸಕರುಗಳಿಗೆ ಅಕ್ಟೋಬರ್-2023ರ ಮಾಹೆಗೆ ಹಾಗೂ ಹಿಂದಿನ ಮಾಹೆಗಳಿಗೆ ಕೊರತೆ ಆಗಿರುವ ಅನುದಾನವನ್ನು ಗೌರವಧನ ಪಾವತಿಸಲು ಲೆಕ್ಕ ಶೀರ್ಷಿಕೆ: 2202-03-103-201-324 ಇತರ ಸರ್ಕಾರಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಗೌರವಧನರಡಿಯಲ್ಲಿ ಆದೇಶಕ್ಕೆ ಲಗತ್ತಿಸಿರುವ ಅನುಬಂಧದಲ್ಲಿ ವಿವರಿಸಿರುವಂತೆ ರೂ. 2,41,89,074/- (ಎರಡು ಕೋಟಿ ನಲ್ವತ್ತೊಂದು ಲಕ್ಷದ ಎಂಬತ್ತೊಂಬತ್ತು ಸಾವಿರದ ಎಪ್ಪತ್ತ ನಾಲ್ಕು ರೂಪಾಯಿಗಳು ಮಾತ್ರ)ಗಳ ಅನುದಾನವನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರುಗಳಿಗೆ ಬಿಡುಗಡೆ ಮಾಡಿ ಅದೇಶಿಸಲಾಗಿದೆ.
2023-24ನೇ ಸಾಲಿನಲ್ಲಿ ವಿವಿಧ ವಿಷಯಗಳಿಗೆ ಸರ್ಕಾರದ ಆದೇಶ ಮತ್ತು ಈ ಕಛೇರಿಯ ಸುತ್ತೋಲೆಯ ಸಂಖ್ಯೆ: ಕಾಶಿಇ/ನೇವಿ-1/ಅಉಅ/90/2023-24, ದಿನಾಂಕ:24.08.2023, ದಿ:13.09.2023 ಮತ್ತು ದಿನಾಂಕ:21.09.2023ರ ಅದೇಶದಂತೆ ಅತಿಥಿ ಉಪನ್ಯಾಸಕರಾಗಿ ನೇಮಕಗೊಂಡು ಪ್ರಾದೇಶಿಕ ಜಂಟಿನಿರ್ದೇಶಕರ ಕಛೇರಿಯ ಕಡ್ಡಾಯವಾಗಿ ಅನುಮೋದನೆಯನ್ನು ಪಡೆದು ಅತಿಥಿ ಉಪನ್ಯಾಸಕರುಗಳಿಗೆ ಗೌರವಧನವನ್ನು ಪಾವತಿಸತಕ್ಕದ್ದು ಮತ್ತು ಬಿಡುಗಡೆ ಮಾಡಲಾಗಿರುವ ಗೌರವಧನವನ್ನು ಕರ್ತವ್ಯ ನಿರ್ವಹಿಸಿದ ಅವಧಿಗೆ ಮಾತ್ರ ಪಾವತಿಸತಕ್ಕದ್ದು ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ .

