ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಸಿಹಿಸುದ್ದಿ ನೀಡಿದ್ದು, , ಕೃಷಿ ಪಂಪ್ ಸೆಟ್ ಗಳಿಗೆ 5 ಗಂಟೆಯ ಬದಲಾಗಿ 7 ಗಂಟೆ ವಿದ್ಯುತ್ ನೀಡಲು ರಾಜ್ಯ ಸರ್ಕಾರವು ಎಸ್ಕಾಂಗಳಿಗೆ ಸೂಚನೆ ನೀಡಿದೆ.
ರೈತರ ಪಂಪ್ ಸೆಟ್ ಗಳಿಗೆ ಕೇವಲ 5 ಗಂಟೆ ವಿದ್ಯುತ್ ಪೂರೈಕೆ ಮಾಡುವ ಮೂಲಕ ರೈತರ ಆಕ್ರೋಶಕ್ಕೆ ತುತ್ತಾಗಿದ್ದ ರಾಜ್ಯ ಸರ್ಕಾರ ಇದೀಗ ಮತ್ತೆ ಮೊದಲಿನಂತೆ 7 ಗಂಟೆ ವಿದ್ಯುತ್ ನೀಡಲು ಎಸ್ಕಾಂಗಳಿಗೆ ಸೂಚನೆ ನೀಡಿದೆ. ಈ ಮೂಲಕ ಎರಡು ಗಂಟೆ ವಿದ್ಯುತ್ ಕಡಿತ ಮಾಡುವ ಆದೇಶವನ್ನು ಮೌಖಿಕ ಆದೇಶವನ್ನು ಹಿಂಪಡೆದಿದೆ.
ರಾಜ್ಯ ಸರ್ಕಾರವು ಇದೀಗ ಹೊಸ ಆದೇಶ ಹೊರಡಿಸಿದ್ದು, ರೈತರ ಪಂಪ್ ಸೆಟ್ ಗಳಿಗೆ 7 ಗಂಟೆ ವಿದ್ಯುತ್ ಪೂರೈಸಲು ಮುಂದಾಗಿದೆ. ಎಸ್ಕಾಂಗಳಿಗೆ ಸ್ಥಳೀಯ ಹೊಂದಾಣಿಕೆಯ ಆಧಾರದಲ್ಲಿ 7 ಗಂಟೆ ವಿದ್ಯುತ್ ಪೂರೈಕೆಯನ್ನು ಪ್ರಾರಂಭಿಸಬೇಕು. ಆದರೆ, ಆಯಾ ವಿಭಾಗದಲ್ಲಿ ಲೋಡ್ ಆಧರಿಸಿ ಕ್ರಮ ವಹಿಸಲು ಸೂಚಿಸಿದೆ.