
ಬೆಳಗಾವಿ : ರಾಜ್ಯ ಸರ್ಕಾರವು ಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ-ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯಡಿ ದೇಶಾದ್ಯಂತ ಚಿಕಿತ್ಸೆ ಪಡೆಯಬಹುದು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯ ಪರಿಷ್ಕೃತ ಕಾರ್ಡ್ ವಿತರಣೆಗೆ ಚಾಲನೆ ನೀಡಿದ್ದಾರೆ.
ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗಳಿಗೆ ಹೊಸ ರೂಪ ನೀಡಲಾಗಿದೆ. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಹೆಸರಲ್ಲಿ ಇನ್ಮುಂದೆ ಹೆಲ್ತ್ ಕಾರ್ಡ್‌ಗಳು ರಾಜ್ಯದ ಜನಸಾಮಾನ್ಯರಿಗೆ ತಲುಪಲಿವೆ.
ರಾಜ್ಯದ ಬಿಪಿಎಲ್ ಕಾರ್ಡುದಾರರು ₹5 ಲಕ್ಷ ಹಾಗೂ APL ಕಾರ್ಡುದಾರರಿಗೆ ಗರಿಷ್ಠ ₹1.50 ಲಕ್ಷ ಮೌಲ್ಯದ ಚಿಕಿತ್ಸಾ ವೆಚ್ಚವನ್ನ ಸರ್ಕಾರ ಭರಿಸಲಿದೆ. ಯೋಜನೆಗೆ ಕೇಂದ್ರದಿಂದ ಶೇ. 34ರಷ್ಟು ಅನುದಾನ ದೊರೆಯಲಿದ್ದು, ರಾಜ್ಯ ಸರ್ಕಾರ ಶೇ.66ರಷ್ಟು ಅನುದಾನವನ್ನ ಒದಗಿಸಲಿದೆ. ರಾಜ್ಯದ ಆಸ್ಪತ್ರೆಗಳ ಜೊತೆಗೆ ದೇಶದ ಇತರ ರಾಜ್ಯಗಳ ಆಸ್ಪತ್ರೆಗಳಲ್ಲೂ ಹೆಚ್ಚಿನ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.