ಬೆಂಗಳೂರು : ಎಪಿಎಲ್, ಬಿಪಿಎಲ್ ಕಾರ್ಡ್ ಇದ್ದವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಸರ್ಕಾರ ಮತ್ತೊಂದು ಯೋಜನೆಯ ಸೇವೆ ನೀಡಲು ಸಿದ್ದವಾಗಿದೆ.
ಹೌದು. ಹಠಾತ್ ಹೃದಯಾಘಾತ, ಎದೆ ನೋವು ಕಾಣಿಸಿಕೊಂಡರೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡುವ ಹೊಸ ಯೋಜನೆಯೊಂದು ಆರಂಭವಾಗಲಿದೆ.
ಯೆಸ್, ಕನ್ನಡ ನಾಡು ಕಂಡ ಅದ್ಬುತ ಕಲಾವಿದ , ಕನ್ನಡಿಗರ ಕಣ್ಮಣಿ ನಟ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಸರ್ಕಾರ ಪುನೀತ್ ಹೃದಯ ಜ್ಯೋತಿ ಜಾರಿಗೆ ತಂದಿದೆ. ಯಾರಿಗಾದರೂ ಹಠಾತ್ ಹೃದಯಾಘಾತ, ಎದೆ ನೋವು ಕಾಣಿಸಿಕೊಂಡರೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ.
ಇದಕ್ಕಾಗಿ ಸರ್ಕಾರ ಕೋಟ್ಯಾಂತರ ರೂ ಹಣ ಮೀಸಲಿಟ್ಟಿದ್ದು, 16 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ 85 ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸ್ಪೋಕ್ ಹಬ್ ಕೇಂದ್ರಗಳನ್ನು ಸರ್ಕಾರ ಪ್ರಾರಂಭಿಸಲಿದೆ. ಪುನೀತ್ ಅವರ ಹೆಸರಿನಲ್ಲಿ ಆರಂಭಿಸಲಾಗುವ ಹೃದಯ ಜ್ಯೋತಿ ಯೋಜನೆಯ ಅಡಿಯಲ್ಲಿ ಯಾವುದೇ ವ್ಯಕ್ತಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡರೆ ತಕ್ಷಣವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಉಚಿತವಾಗಿ ಇಸಿಜಿ ಮಾಡಲಾಗುತ್ತದೆ.
ಅಲ್ಲದೇ ಎದೆ ನೋವು ತೀವ್ರತರವಾಗಿದ್ದರೆ ಇಸಿಜಿ ಆಧಾರದ ಮೇಲೆ ವ್ಯಕ್ತಿಗೆ ಬೇಕಾಗಿರುವ ಅಗತ್ಯ ಟೆನೆಕ್ಟ್ ಪ್ಲಸ್ ಇಂಜೆಕ್ಷನ್ ನೀಡಲಾಗುತ್ತೆ, ಇದಕ್ಕೆ 30 ರಿಂದ 40 ಸಾವಿರ ರೂ ತಗಲಿದ್ದು, ಇದರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.