
ನವದೆಹಲಿ: ದೆಹಲಿಯ ಚಿನಿವಾರ ಪೇಟೆಯಲ್ಲಿ ಸತತ ಎರಡನೇ ದಿನವಾದ ಮಂಗಳವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ದರ ಕುಸಿತ ಕಂಡಿದೆ.
10 ಗ್ರಾಂ ಶುದ್ಧ ಚಿನ್ನದ ದರ 1750 ರೂಪಾಯಿ ಇಳಿಕೆಯಾಗಿದ್ದು, 77,800ರೂ.ಗೆ ಮಾರಾಟವಾಗಿದೆ. ಸ್ಟ್ಯಾಂಡರ್ಡ್ ಚಿನ್ನದ ದರ 10 ಗ್ರಾಂ ಗೆ 1,750 ರೂ. ಇಳಿಕೆಯಾಗಿದ್ದು, 77,400 ರೂಪಾಯಿಗೆ ಮಾರಾಟವಾಗಿದೆ.
ಅದೇ ರೀತಿ ಬೆಳ್ಳಿ ದರ ಕೆಜಿಗೆ 2700 ರೂ. ಕಡಿಮೆಯಾಗಿದ್ದು, 91,300 ರೂಪಾಯಿಗೆ ಮಾರಾಟವಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.