Self Harming : ಹುಡುಗಿಯರು ಪ್ರೀತಿ ಮಾಡ್ಬೇಡಿ ಪ್ಲೀಸ್…! : ಡೆತ್ ನೋಟ್ ಬರೆದಿಟ್ಟು ಪ್ರಾಣಬಿಟ್ಟ ಯುವತಿ

ಬೆಂಗಳೂರು : ಹುಡುಗಿಯರು ಪ್ರೀತಿ ಮಾಡ್ಬೇಡಿ ಪ್ಲೀಸ್ , ಗುಡ್ ಬೈ ಎಂದು ಡೆತ್ ನೋಟ್ ಬರೆದಿಟ್ಟು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕೆಂಪಾಪುರದಲ್ಲಿ ನಡೆದಿದೆ.

ನನ್ನ ಸಾವಿಗೆ ನನ್ನ ಪ್ರಿಯಕರ ಅಕ್ಷಯ್ ಕಾರಣ ಎಂದು ಯುವತಿ ವಿದ್ಯಾಶ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೀತಿಸುತ್ತಿದ್ದ ಯುವಕ ಅಕ್ಷಯ್ ವಿದ್ಯಾಶ್ರೀ ಬಳಿ 1,50 ಲಕ್ಷ ಹಣ ಪಡೆದುಕೊಂಡಿದ್ದ ಎನ್ನಲಾಗಿದೆ. ಕೊಟ್ಟ ಹಣ ಕೇಳಿದ್ದಕ್ಕೆ ಅಕ್ಷಯ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ಫೇಸ್ ಬುಕ್ ನಲ್ಲಿ ಪರಿಚಯನಾದ ಜಿಮ್ ಟ್ರೇನರ್ ಅಕ್ಷಯ್ ಎಂಬಾತ ವಿದ್ಯಾಶ್ರೀಗೆ ಪರಿಚಿತವಾಗಿದ್ದು, ಸ್ನೇಹ, ಪ್ರೀತಿವರೆಗೂ ತಿರುಗಿದೆ. ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರ ಮಧ್ಯೆ ಮೂರು ತಿಂಗಳ ಹಿಂದೆ ಬಿರುಕುಂಟಾಗಿದೆ. ಅಕ್ಷಯ್ ತನ್ನನ್ನು ಮದುವೆಯಾಗುತ್ತಾನೆ ಎಂದು ನಂಬಿದ್ದ ವಿದ್ಯಾಶ್ರೀಗೆ ಆತ ಮೋಸ ಮಾಡಿರುವುದು ಗೊತ್ತಾಗಿದೆ. ಆತನಿಗಾಗಿ ಸಾಕಷ್ಟು ಹಣವನ್ನು ನೀಡಿದ್ದ ವಿದ್ಯಾಶ್ರೀ, ವಾಪಸ್ ಕೇಳಿದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ಇದರಿಂದ ಮಾನಸಿಕವಾಗಿ ವಿದ್ಯಾಶ್ರೀ ಕುಗ್ಗಿ ಹೋಗಿದ್ದಳಂತೆ.

ನನ್ನ ಸಾವಿಗೆ ಅಕ್ಷಯ್ ಕಾರಣ, ಅವನು ನನ್ನ ನಾಯಿ ತರ ಟ್ರೀಟ್ ಮಾಡುತ್ತಿದ್ದಾನೆ, ನನಗೆ ಕೊಡಬೇಕಾದ ಹಣ ಕೇಳಿದಾಗ ನನಗೆ ಕೆಟ್ಟದಾಗಿ ಬೈದಿದ್ದಾನೆ, ದಿನೇ ದಿನೇ ನನಗೆ ತುಂಬಾ ಸ್ಟ್ರೆಸ್ ಆಗ್ತಿದೆ ಹುಡುಗಿಯರು ಪ್ರೀತಿ ಮಾಡ್ಬೇಡಿ ಪ್ಲೀಸ್ , ಗುಡ್ ಬೈ ಎಂದು ಡೆತ್ ನೋಟ್ ಬರೆದಿಟ್ಟು ವಿದ್ಯಾಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರೋಪಿ ಅಕ್ಷಯ್ ವಿರುದ್ಧ ಕಿರುಕುಳ, ಆತ್ಮಹತ್ಯೆ ಪ್ರಚೋದನೆ ಕೇಸ್ ದಾಖಲಿಸಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read