
ರಾಮನಗರ: ತನಗೆ ಮುದ್ದೆ ಮಾಡಲು ಬರಲ್ಲ, ಮುದ್ದೆ ಮಾಡಿಕೊಡುವಂತೆ ಹೇಳಿ ಯುವತಿಯನ್ನು ಕರೆದು ಕಾಮುಕನೊಬ್ಬ ಅತ್ಯಾಚಾರವೆಸಗಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರದ ಬಿಡದಿಯಲ್ಲಿ ಈ ಘಟನೆ ನಡೆದಿದ್ದು, ನೆರೆಮನೆಯಲ್ಲಿಯೇ ವಾಸವಿದ್ದ ಯುವಕನೊಬ್ಬ, ಪಕ್ಕದ ಮನೆಯ ಯುವತಿಯನ್ನು ತನಗೆ ಮುದ್ದೆ ಮಾಡಲು ಬರಲ್ಲ ಎಂದು ಮನೆಗೆ ಕರೆದು ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ಕೃತ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಸಂತ್ರಸ್ತ ಯುವತಿ ಬಿಡದಿ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಗೋಪಿ ಬಂಧಿತ ಆರೋಪಿ. ಇದೇ ವೇಳೆ ಇನ್ನೋರ್ವ ಚಂದ್ರು ಎಂಬಾತನ್ನನ್ನು ವಶಕ್ಕೆ ಪಡೆದಿದ್ದಾರೆ. ಚಂದ್ರು ಎಂಬಾತನ ಮನೆಯಲ್ಲಿಯೇ ಈ ಘಟನೆ ನಡೆದಿದೆ ಎನ್ನಲಾಗಿದೆ.
ಆರೋಪಿ ಗೋಪಿ ಮೊಬೈಲ್ ನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸಿದ್ದಾರೆ.