alex Certify ಈ ಕಾರಣಕ್ಕೆ ಹುಡುಗರು ಹುಡುಗಿಯರ ತುಟಿ ನೋಡ್ತಾರಂತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಹುಡುಗರು ಹುಡುಗಿಯರ ತುಟಿ ನೋಡ್ತಾರಂತೆ

ಅನೇಕ ಹುಡುಗರು ಹುಡುಗಿಯರು ಮಾತನಾಡುವಾಗ ಅವರ ತುಟಿಗಳನ್ನು ನೋಡ್ತಾರೆ. ಅದರಲ್ಲೂ ತಾವು ಇಷ್ಟಪಡುವ ಹುಡುಗಿಯರ ತುಟಿಯನ್ನು ಹೆಚ್ಚಾಗಿ ಗಮನಿಸ್ತಾರೆ ಹುಡುಗರು. ಆದ್ರೆ ಅವರು ತುಟಿ ನೋಡ್ತಿದ್ದಾರೆ ಎಂಬುದನ್ನು ಕೆಲವರು ಗಮನಿಸಿಯೇ ಇರೋದಿಲ್ಲ. ಮತ್ತೆ ಕೆಲವರಿಗೆ ಏಕೆ ನೋಡ್ತಾರೆ ಎನ್ನುವುದು ತಿಳಿದಿರುವುದಿಲ್ಲ. ಹುಡುಗರು ಹುಡುಗಿಯರ ತುಟಿ ನೋಡಲು ಅನೇಕ ಕಾರಣಗಳಿವೆ.

ಪ್ರೀತಿ : ಯಸ್, ಯಾವ ಹುಡುಗ, ಹುಡುಗಿಯನ್ನು ಪ್ರೀತಿಸ್ತಾನೋ ಇಲ್ಲ ಆಕೆ ಜೊತೆ ಜೀವನ ನಡೆಸಲು ಇಷ್ಟಪಡ್ತಾನೋ ಆತ ಅವಶ್ಯವಾಗಿ ಆಕೆಯ ತುಟಿಯನ್ನು ನೋಡ್ತಾನೆ. ಆಕೆಗೆ ಕಿಸ್ ಮಾಡಲು ಇಷ್ಟಪಡ್ತಾನೆ.

ಲಿಪ್ ಸ್ಟಿಕ್ ಬಣ್ಣ : ಬಣ್ಣ ಬಣ್ಣದ ಲಿಪ್ ಸ್ಟಿಕ್ ಕೂಡ ಹುಡುಗರನ್ನು ಆಕರ್ಷಿಸುತ್ತದೆ. ಇದಕ್ಕೆ ಐಶ್ವರ್ಯ ರೈ ಬಚ್ಚನ್ ಉತ್ತಮ ಉದಾಹರಣೆ. ವಿವಿಧ ಕಲರ್ ಲಿಪ್ ಸ್ಟಿಕ್ ಹಚ್ಚುವ ಐಶ್ ಈ ಕಾರಣಕ್ಕೆ ಸಾಕಷ್ಟು ಸುದ್ದಿ ಮಾಡಿದ್ದಾಳೆ. ಆಕರ್ಷಕವಾಗಿರುವ ಲಿಪ್ ಸ್ಟಿಕ್ ಹಚ್ಚಿಕೊಂಡ್ರೆ ಹುಡುಗರು ಮೊದಲು ನೋಡುವುದು ಹುಡುಗಿಯರ ತುಟಿಯನ್ನು.

ತುಟಿಯನ್ನು ಓದಲು : ಕೆಲ ಹುಡುಗರು, ಹುಡುಗಿಯರು ಮಾತನಾಡುವಾಗ ಅವರ ತುಟಿಯನ್ನು ನೋಡ್ತಾ ಇರ್ತಾರೆ. ಹೀಗೆ ನೋಡುವವರು ಮಾತನ್ನು ಕೇಳ್ತಾ ಇಲ್ಲ ಅಂತಾ ಹುಡುಗಿಯರು ಅಂದುಕೊಳ್ತಾರೆ. ಆದ್ರೆ ಇದು ತಪ್ಪು. ಕೇಳುವ ಜೊತೆಗೆ ಓದಲು ಕೆಲವರು ಇಷ್ಟಪಡ್ತಾರೆ. ಹಾಗಾಗಿ ಅವರ ತುಟಿಯನ್ನೇ ನೋಡುತ್ತಿರುತ್ತಾರೆ.

ಹುಡುಗಿ ಅರ್ಥ ಮಾಡಿಕೋ : ನೀವು ನಂಬಿ, ಬಿಡಿ. ಅನೇಕ ಹುಡುಗರು ಕೆಲವೊಂದು ವಿಷಯಗಳನ್ನು ಹುಡುಗಿಯರ ಮುಂದೆ ಹೇಳುವುದಿಲ್ಲ. ಹುಡುಗಿ ಬೇರೆ ಬೇರೆ ವಿಚಾರದ ಬಗ್ಗೆ ಮಾತನಾಡ್ತಾ ಇದ್ದರೆ ಆಕೆ ತುಟಿಯನ್ನೇ ನೋಡುತ್ತಿರುತ್ತಾರೆ. ಸ್ವಲ್ಪ ಸುಮ್ಮನಿದ್ದು, ನನ್ನ ಹೃದಯದ ಮಾತನ್ನು ಕೇಳು ಎನ್ನಲು ಅವರು ಹೀಗೆ ಮಾಡ್ತಾರೆ.

ಸೆಕ್ಸಿ ತುಟಿ : ಮಹಿಳೆ ಸುಂದರವಾಗಿ ಕಾಣಲು ಆಕೆ ತುಟಿ ಕೂಡ ಕಾರಣ. ಕೆಲವರ ತುಟಿಯೇ ಅವರ ಮುಖದ ಆಕರ್ಷಣೆಯಾಗಿರುತ್ತದೆ. ಹಾಗಾಗಿ ಹುಡುಗರು ಗಮನ ತುಟಿಯತ್ತ ಹೋಗುತ್ತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...