ಕೂದಲಿನ ಈ ಸಮಸ್ಯೆಗಳನ್ನು ನಿವಾರಿಸುತ್ತೆ ಶುಂಠಿ ಹೇರ್ ಸ್ಪ್ರೇ

ಪ್ರತಿಯೊಬ್ಬ ಮಹಿಳೆಯು ಕೂದಲು ಕಪ್ಪಾಗಿ, ದಪ್ಪವಾಗಿ ಆಕರ್ಷಕವಾಗಿರಬೇಕೆಂದು ಬಯಸುತ್ತಾಳೆ. ಆದರೆ ವಾತಾವರಣದ ಮಾಲಿನ್ಯ, ಕೊಳೆ, ಧೂಳಿನಿಂದಾಗಿ ಕೂದಲು ಹಾಳಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಶುಂಠಿಯ ಹೇರ್ ಸ್ಪ್ರೇ ಬಳಸಿ.

ಶುಂಠಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿದ್ದು, ಇದು ಕೂದಲಿನ ಸಮಸ್ಯೆಗೆ ಕಾರಣವಾಗುವಂತಹ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ. ನೆತ್ತಿಯಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ನೆತ್ತಿಯ ತುರಿಕೆ, ಹೊಟ್ಟು, ಶುಷ್ಕತೆಯನ್ನು ನಿವಾರಿಸುತ್ತದೆ.

½ ಕಪ್ ಅಲೋವೆರಾ ಜೆಲ್ ಗೆ, ಶುಂಠಿ ರಸ 2 ಚಮಚ, ಹರಳೆಣ್ಣೆ ½ ಚಮಚ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಪ್ರೇ ಬಾಟಲಿನಲ್ಲಿ ಹಾಕಿ ಕೂದಲನ್ನು ತೊಳೆಯುವ 10 ನಿಮಿಷಗಳ ಮೊದಲು ನೆತ್ತಿಗೆ ಹಚ್ಚಿ ಮಸಾಜ್ ಮಾಡಿ. ಬಳಿಕ ವಾಶ್ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read