alex Certify Viral Photos: ಮನೆಗಳನ್ನೇ ನುಂಗಿಹಾಕುವಂತೆ ಕಾಣಿಸಿಕೊಂಡ ಬೃಹತ್ ರಸ್ತೆಗುಂಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Photos: ಮನೆಗಳನ್ನೇ ನುಂಗಿಹಾಕುವಂತೆ ಕಾಣಿಸಿಕೊಂಡ ಬೃಹತ್ ರಸ್ತೆಗುಂಡಿ

ರಸ್ತೆಯಲ್ಲಿ ಗುಂಡಿಗಳು ಎದುರಾದಾಗ ಸವಾರರು ತಬ್ಬಿಬ್ಬಾಗೋದು ಸಾಮಾನ್ಯ. ಬೆರಳೆಣಿಕೆ ಅಡಿಗಳಷ್ಟು ಆಳದ ಗುಂಡಿಗಳೇ ಸಂಚಾರ ಮಾರ್ಗದಲ್ಲಿ ಭಯ ಹುಟ್ಟಿಸುತ್ತವೆ. ಆದರೆ ಜನವಸತಿ ಪ್ರದೇಶದಲ್ಲಿ ಸುಮಾರು 60 ಅಡಿ ಆಳದ ಗುಂಡಿ ಬ್ರಿಟನ್ ನ ಮೆರ್ತಿರ್ ಟೈಡ್‌ಫಿಲ್ ವಸತಿ ಪ್ರದೇಶದ ಜನರನ್ನ ದುಗುಡಕ್ಕೆ ದೂಡಿದೆ.

ತಮ್ಮ ಮನೆಗಳ ಸಮೀಪವಿರುವ ರಸ್ತೆ ಮತ್ತು ಪಾದಚಾರಿ ಮಾರ್ಗದಲ್ಲಿ ಸುಮಾರು 60 ಅಡಿಗಳಷ್ಟು ಅಂದಾಜು ಮಾಡಿದ ಬೃಹತ್ ಗುಂಡಿ ಕಂಡು ನಿವಾಸಿಗಳು ಗಾಬರಿಗೊಂಡರು. ವರದಿಗಳ ಪ್ರಕಾರ ಗುಂಡಿಯನ್ನು ಮುಚ್ಚಿದ್ದು ವಸತಿ ಎಸ್ಟೇಟ್‌ನಲ್ಲಿರುವ ಸುಮಾರು 30 ಮನೆಗಳನ್ನು ಸ್ಥಳಾಂತರಿಸಲಾಗಿದೆ. ದೊಡ್ಡ ರಸ್ತೆಗುಂಡಿಯಿಂದ ತಮ್ಮ ಮನೆಗಳನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಹಲವರು ಆತಂಕ ವ್ಯಕ್ತಪಡಿಸಿದರು.

ಬೃಹತ್ ಪ್ರಮಾಣದ ರಸ್ತೆ ಗುಂಡಿ ಕಾಣಿಸಿಕೊಂಡ ಕಾರಣವನ್ನು ಇನ್ನೂ ಪತ್ತೆ ಮಾಡಬೇಕಾಗಿದೆ ಮತ್ತು ದೃಢೀಕರಿಸಬೇಕಾಗಿದೆ. ಆದಾಗ್ಯೂ, ಮೋರಿ ನೀರು ರಸ್ತೆ ಕೆಳಭಾಗದಲ್ಲಿ ಹಾದುಹೋಗಲು ಮಾಡಿದ್ದ ವ್ಯವಸ್ಥೆ ಹಾಳಾಗಿದ್ದರಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಸ್ತೆ ಗುಂಡಿ ಸೃಷ್ಟಿಯಾಗಿದೆ ಎಂದು ನಂಬಲಾಗಿದೆ.

— Merthyr Tydfil County Borough Council (@MerthyrCBC) December 1, 2024

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...