ಬೀದಿ ನಾಯಿಗಳಿಗಾಗಿ ಕಿತ್ತಾಡಿದ ಮಹಿಳೆಯರು: ಶಾಕಿಂಗ್ ವಿಡಿಯೋ ವೈರಲ್​

ಬೀದಿನಾಯಿಗಳನ್ನು ನಿಷೇಧಿಸುವ ಕುರಿತು ಘಾಜಿಯಾಬಾದ್‌ನ ರಾಜ್ ನಗರದಲ್ಲಿ ಮಹಿಳೆಯರು ಭಾರಿ ಪ್ರಮಾಣದಲ್ಲಿ ಕಿತ್ತಾಟ ಮಾಡಿಕೊಂಡಿರುವ ವಿಡಿಯೋ ವೈರಲ್​ ಆಗಿದೆ. ಬೀದಿನಾಯಿಗಳನ್ನು ನಿಷೇಧಿಸುವ ಕುರಿತು ಮಹಿಳೆಯರು ಜಗಳವಾಡುತ್ತಾ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಈ ಜಗಳ ವಿಕೋಪಕ್ಕೆ ಹೋದಾಗ ಪರಸ್ಪರ ಕೂದಲನ್ನು ಎಳೆಯುವುದನ್ನು ಕಾಣಬಹುದು, ಒಬ್ಬರನ್ನೊಬ್ಬರು ಹೊಡೆಯುವುದನ್ನು ಮತ್ತು ಇನ್ನೂ ಜೋರಾಗಿ ಹೊಡೆಯಿರಿ ಎನ್ನುವುದು ವಿಡಿಯೋದಲ್ಲಿ ಕೇಳಿಸುತ್ತಿದೆ.

ಪೊಲೀಸರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ರಿವರ್ ಹೈಟ್ಸ್ ಸೊಸೈಟಿಯ ಸಮಿತಿಯು ಬೀದಿ ನಾಯಿಗಳನ್ನು ಪ್ರದೇಶದಿಂದ ಹೊರಕ್ಕೆ ಹಾಕಲು ನಿರ್ಧರಿಸಿದ್ದಾರೆ. ಆದರೆ ಇಲ್ಲಿರುವ ಶ್ವಾನ ಪ್ರೇಮಿಗಳು ಈ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೀದಿನಾಯಿ ನಿಷೇಧದ ಬಗ್ಗೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದರಿಂದ ಈ ಘರ್ಷಣೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಸೊಸೈಟಿ ಆವರಣದಲ್ಲಿರುವ ನಾಯಿಗಳನ್ನು ಸೆಣಬಿನ ಚೀಲಗಳಲ್ಲಿ ಹಾಕಲಾಗುತ್ತಿತ್ತು. ಪೂನಂ ಕಶ್ಯಪ್ ಎಂಬ ಪ್ರಾಣಿಪ್ರಿಯರು ಇದನ್ನು ವಿರೋಧಿಸಿ ದನಿ ಎತ್ತಿದಾಗ ಇಷ್ಟೆಲ್ಲಾ ರಾದ್ಧಾಂತವಾಗಿದೆ.

https://twitter.com/JhalkoDelhi/status/1613410429874892807?ref_src=twsrc%5Etfw%7Ctwcamp%5Etweetembed%7Ctwterm%5E1613410429874892807%7Ctwgr%5Ec31a23d3ab71f5644efe1cbe0bd3a46890473908%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fghaziabad-women-in-raj-nagar-extension-pull-hair-and-beat-each-other-over-stray-dogs-dramatic-fight-video-goes-viral

https://twitter.com/ghaziabadpolice/status/1613422680048537602?ref_src=twsrc%5Etfw%7Ctwcamp%5Etweetembed%7Ctwterm%5E1613422680048537602%7Ctwgr%5Ec31a23d3ab71f5644efe1cbe0bd3a46890473908%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fghaziabad-women-in-raj-nagar-extension-pull-hair-and-beat-each-other-over-stray-dogs-dramatic-fight-video-goes-viral

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read