ಬೆಂಗಳೂರು : ರಾಜ್ಯ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದ್ದು, ವಿವಿಧ ಖಾಸಗಿ ಉದ್ದಮಿಗಳಲ್ಲಿ ದುಡಿಯುವ ಕಾರ್ಮಿಕರ ಕನಿಷ್ಟ ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ.
ಕಾರ್ಮಿಕರ ವೇತನ ಪರಿಷ್ಕರಣೆ ಸಂಬಂಧ ರಾಜ್ಯ ಸರ್ಕಾರವು ಕನಿಷ್ಟ ವೇತನ ಮಂಡಳಿಯನ್ನು ಇದೇ ವಾರದಲ್ಲಿ ರಚನೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ರಾಜ್ಯದಲ್ಲಿ 70 ಲಕ್ಷ ಕಾರ್ಮಿಕರು ದುಡಿಯುತ್ತಿದ್ದಾರೆ. ಎಲ್ಲ ವಲಯದಲ್ಲಿ ದುಡಿಯುವ ಕಾರ್ಮಿಕರ ವೇತನ ಏಕರೂಪದಲ್ಲಿರಬೇಕು ಎಂದು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕೃಷಿ ಕೂಲಿ ಕಾರ್ಮಿಕರು, ನಿರ್ಮಾಣ, ಟೈಲರಿಂಗ್, ಗಾರ್ಮೆಂಟ್ಸ್, ವಾಹನ ಚಲಾಕರು, ನಿರ್ವಾಹಕರು, ಗ್ಯಾರೇಜ್ ಕಾರ್ಮಿಕರು, ಬೀಡಿ ಉದ್ಯಮ, ಲಾಜಿಸ್ಟಿಕ್, ಅಗರಬತ್ತಿ ಉದ್ಯಮ, ಹೋಟೆಲ್ ಹಮಾಲಿಗಳು, ಸಣ್ಣ ಕೈಗಾರಿಕೆಗಳ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಯಕರಿಗೆ ಶೀಘ್ರವೇ ಹೆಚ್ಚಿನ ವೇತನ ಸಿಗುವ ಸಾಧ್ಯತೆ ಇದೆ.