ಕೊಲೆಸ್ಟ್ರಾಲ್ ಇಳಿಸುವಲ್ಲಿ ಬೆಳ್ಳುಳ್ಳಿಯ ಪಾತ್ರ ದೊಡ್ಡದು. ನಿತ್ಯ ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಒಂದು ಅಥವಾ ಎರಡು ಬೆಳ್ಳುಳ್ಳಿ ತಿಂದರೆ ಕೆಟ್ಟ ಕೊಬ್ಬು ಕರಗಿ ಬೊಜ್ಜು ದೂರವಾಗುತ್ತದೆ.
ಜೀರ್ಣಕ್ರಿಯೆಯನ್ನೂ ಇದು ಸುಲಲಿತಗೊಳಿಸುತ್ತದೆ. ಮಲಬದ್ಧತೆಯನ್ನು ದೂರಮಾಡುತ್ತದೆ. ಅಜೀರ್ಣದ ಸಮಸ್ಯೆ ಇರುವವರು ನಿತ್ಯ ಬೆಳ್ಳುಳ್ಳಿ ಸೇವಿಸಿದರೆ ಸಾಕು, ನಿಮ್ಮ ಹೊಟ್ಟೆಯುಬ್ಬರಿಸುವಂಥ ಸಮಸ್ಯೆಗಳು ಬಹುಬೇಗ ದೂರವಾಗುತ್ತವೆ.
ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಗುಣವೂ ಬೆಳ್ಳುಳ್ಳಿಗಿದೆ. ಹೃದಯದ ಆರೋಗ್ಯವನ್ನು ಕಾಪಾಡುವ ಬೆಳ್ಳುಳ್ಳಿ ರಕ್ತಹೀನತೆ ಸಮಸ್ಯೆ ಕಾಡದಂತೆ ನೋಡಿಕೊಳ್ಳುತ್ತದೆ. ಈ ಪ್ರಯೋಜನಗಳನ್ನು ನೀವು ಪಡೆಯಬೇಕಿದ್ದರೆ ಹಸಿ ಬೆಳ್ಳುಳ್ಳಿಯನ್ನೇ ಸೇವಿಸಬೇಕು ಹೊರತು ಬೇಯಿಸಿದ್ದನ್ನಲ್ಲ.
ನೇರವಾಗಿ ಬೆಳ್ಳುಳ್ಳಿಯನ್ನು ಬಾಯಿಯಲ್ಲಿ ಹಾಕಿ ಜಗಿಯಲು ಇಷ್ಟವಾಗದಿದ್ದರೆ ಅದನ್ನು ಚಟ್ನಿ ಅಥವಾ ಸಲಾಡ್ ಗೆ ಹಾಕಿ ಸೇವಿಸಬಹುದು. ನಿಶ್ಯಕ್ತಿಯನ್ನು ದೂರಮಾಡಿ ನಿಮ್ಮಲ್ಲಿ ಹೊಸ ಚೈತನ್ಯ ತುಂಬುವ ಬೆಳ್ಳುಳ್ಳಿಯಿಂದ ದೂರವಿರದಿರಿ. ನಿತ್ಯ ಬೆಳ್ಳುಳ್ಳಿ ಬಳಸಿ ಆರೋಗ್ಯ ಕಾಪಾಡಿಕೊಳ್ಳಿ.