
ನವದೆಹಲಿ : ಅಕ್ಟೋಬರ್ 1 ರ ಗಾಂಧಿ ಜಯಂತಿ ದಿನ ದೇಶದ ಜನರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಪ್ರಧಾನಿ ಮೋದಿ, ಅಕ್ಟೋಬರ್ 1 ರಂದು ಬೆಳಿಗ್ಗೆ 10 ಗಂಟೆಗೆ, ನಾವು ಒಂದು ಪ್ರಮುಖ ಸ್ವಚ್ಚತಾ ಉಪಕ್ರಮಕ್ಕಾಗಿ ಒಟ್ಟುಗೂಡುತ್ತೇವೆ. ಸ್ವಚ್ಛ ಭಾರತವು ಹಂಚಿಕೆಯ ಜವಾಬ್ದಾರಿಯಾಗಿದೆ, ಮತ್ತು ಪ್ರತಿಯೊಂದು ಪ್ರಯತ್ನವೂ ಮಹತ್ವದ್ದಾಗಿದೆ. ಸ್ವಚ್ಛ ಭವಿಷ್ಯವನ್ನು ತರುವ ಈ ಉದಾತ್ತ ಪ್ರಯತ್ನದಲ್ಲಿ ಸೇರಿಕೊಳ್ಳಿ ಎಂದು ಕರೆ ಕೊಟ್ಟಿದ್ದಾರೆ.
ಪ್ರಧಾನಿ ಮೋದಿ ಅವರು ಕಳೆದ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ, ಸ್ವಚ್ಛತೆಗಾಗಿ ದೊಡ್ಡ ಕಾರ್ಯಕ್ರಮವೊಂದನ್ನು ಭಾನುವಾರ ಹಮ್ಮಿಕೊಳ್ಳಲಾಗಿದೆ. ನೀವ ುಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನೀವು ನಿಮ್ಮ ಬೀದಿಗಳಲ್ಲಿ, ನೆರೆಹೊರೆಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಹೇಳಿದ್ದರು.